ಕಿರಣ್ ಬೇಡಿ ಪತಿ ನಿಧನ

Update: 2016-01-31 10:56 GMT

ಜಲಂಧರ್/ಹೊಸದಿಲ್ಲಿ: ದೇಶದ ಮಾಜಿ ಐಪಿಎಸ್ ಮಹಿಳಾ ಆಧಿಕಾರಿಣಿ ಕಿರಣ್‌ಬೇಡಿಯ ಪತಿ ಬೃಜ್ ಬೇಡಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರು ಕೆಲವು ದಿನಗಳಿಂದ ಅಸ್ವಸ್ಥರಾಗಿ ಗುಡ್‌ಗಾಂವ್‌ನ ವೇದಾಂತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಬೃಜ್ ಬೇಡಿ ಕೆಲವು ಸಾಮಾಜಿಕ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದರು. ಅವರು ಅಮೃತಸರದ ಮತ್‌ಬೂಲ್‌ಪುರಾದ ಒಂದು ಬಡ ಮಕ್ಕಳ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಶಾಲೆ ಬ್ರಿಜ್ ಬೇಡಿಯ ಪ್ರಯತ್ನಗಳಿಂದಾಗಿ ಆರಂಭಗೊಂಡಿತ್ತು. ಅವರ ಪತ್ನಿ ಕಿರಣ್ ಬೇಡಿ ಶಾಲೆಗಾಗಿ ಸಹಾಯವಿತ್ತಿದ್ದರು. ಉದ್ಯಮಿಯಾಗಿರುವುದರ ಜೊತೆಗೆ ಬೃಜ್ ಬೇಡಿ ಸಾಮಾಜಿಕ ಕ್ಷೇತ್ರಗಳಲ್ಲಿಯೂ ಭಾರೀ ಕೊಡುಗೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News