ಸಿರಿಯ: ಅವಳಿ ಸ್ಫೋಟದಲ್ಲಿ 45 ಸಾವು
Update: 2016-01-31 23:05 IST
ಡಮಾಸ್ಕಸ್, ಜ. 31: ಸಿರಿಯದ ರಾಜಧಾನಿ ಡಮಾಸ್ಕಸ್‌ನ ದಕ್ಷಿಣದ ಸಯ್ಯಿದಾ ಝೈನಾಬ್ ಜಿಲ್ಲೆಯಲ್ಲಿ ರವಿವಾರ ನಡೆದ ಅವಳಿ ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 45 ಮಂದಿ ಮೃತಪಟ್ಟಿದ್ದಾರೆ ಹಾಗೂ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಮೊದಲು ಆತ್ಮಹತ್ಯಾ ಕಾರ್ ಬಾಂಬ್ ಸ್ಫೋಟವೊಂದು ನಡೆಯಿತು. ಸ್ಫೋಟ ನಡೆದ ಸ್ಥಳದಲ್ಲಿ ಜನರು ಜಮಾಯಿಸಿದಾಗ ಅವರ ನಡುವೆ ಇನ್ನೊಬ್ಬ ಆತ್ಮಹತ್ಯಾ ಬಾಂಬರ್ ತನ್ನ ಸೊಂಟಕ್ಕೆ ಕಟ್ಟಿಕೊಂಡಿದ್ದ ಸ್ಫೋಟಕಗಳನ್ನು ಸ್ಫೋಟಿಸಿದನು.