×
Ad

ಕಿರಣ್‌ಬೇಡಿ ಪತಿ ಬ್ರಿಜ್ ನಿಧನ

Update: 2016-01-31 23:44 IST

ಗುರ್ಗಾಂವ್,ಜ.31: ಭಾರತದ ಪ್ರಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿಯವರ ಪತಿ ಬ್ರಿಜ್ ಬೇಡಿ ರವಿವಾರ ನಿಧನರಾಗಿದ್ದಾರೆ. ಅಲ್ಪಕಾಲದ ಆಸೌಖ್ಯದಿಂದ ಬಳಲುತ್ತಿದ್ದ ಅವರು ಗುರ್ಗಾಂವ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಅವರಿಗೆ 76 ವರ್ಷ ವಯಸ್ಸಾಗಿತ್ತು.

    ಮೂತ್ರಪಿಂಡ ಹಾಗೂ ಉಸಿರಾಟದ ತೊಂದರೆಗಳಿಂದ ನರಳುತ್ತಿದ್ದ ಬ್ರಿಜ್‌ಬೇಡಿಯವರನ್ನು ಜನವರಿ 28ರಂದು ಮೇಧಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೇಹಸ್ಥಿತಿ ವಿಷಮಗೊಂಡ ಕಾರಣ, ಅವರನ್ನು ತುರ್ತುನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿತ್ತು.ಇಂದು ಬೆಳಗ್ಗೆ 11:00 ಗಂಟೆಯ ವೇಳೆಗೆ,ಬ್ರಿಜ್ ಕೊನೆಯುಸಿರೆಳೆದರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.ಛಾಯಾಚಿತ್ರಗ್ರಾಹಕ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದ ಬ್ರಿಜ್ ಬೇಡಿ, ಬಡಮಕ್ಕಳಿಗಾಗಿ ಅಮೃತಸರದಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News