×
Ad

ಮಣ್ಣು- ಹೊಯ್ಗೆ ತಿಂದು ಈತ ಗಟ್ಟಿಮುಟ್ಟಾಗಿಯೇ ಇದ್ದಾನೆ!

Update: 2016-02-01 16:36 IST

ಕಾನ್‌ಪುರ: ಉತ್ತಪ್ರದೇಶದ ಫಾರೂಕ್‌ಬಾದ್ ಜಿಲ್ಲೆಯ ನೇಕ್‌ಪುರ ಚೌಸರಿ ಕಸ್ಬಾದ 45ವರ್ಷ ವಯಸ್ಸಿನ ಹಂಸ್‌ರಾಜ್ ಕಳೆದ 25 ವರ್ಷಗಳಿಂದ ಮರಳು ಅಥವಾ ಮಣ್ಣನ್ನು ತಿನ್ನುತ್ತಿದ್ದಾನೆ. ಆಶ್ಚರ್ಯಕಾರಿ ಸುದ್ದಿಯೆಂದರೆ ಹಂಸ್‌ರಾಜ್ ಮರಳು ಅಥವಾ ಮಣ್ಣನ್ನು ತಿಂದ ನಂತರವೂ ಸಂಪೂರ್ಣ ಆರೋಗ್ಯದಿಂದ್ದಾನೆ.

  

ವರದಿಯಾಗಿರುವಂತೆ ಇಪ್ಪತ್ತು ವರ್ಷದವನಾಗಿದ್ದಾಗ ಮಣ್ಣು ಅಥವಾ ಮರಳು ತಿನ್ನುವ ಚಟ ಅವನಿಗೆ ಅಂಟಿಕೊಂಡಿತ್ತು. ಆಗಲೆಲ್ಲ ಅವನು ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗಲು ತಯಾರಾದರೆ ಅವನಿಗೆ ಚಾ-ನಾಷ್ಟದ ಜೊತೆಗೆ ಮಣ್ಣು ಅಥವಾ ಹೊಯ್ಗೆ ಸಿಗದಿದ್ದರೆ ಮಾಡುವ ಕೆಲಸದಲ್ಲಿ ಉತ್ಸಾಹವಿರುತ್ತಿರಲಿಲ್ಲ.

ಬಾಲ್ಯದಿಂದ ಹಿಡಿದು ಯುವಕನಾಗುವವರೆಗೆ ಮಣ್ಣು ಅಥವಾ ಹೊಯ್ಗೆ ತಿನ್ನುತ್ತಾ ಅವನಿಗೆ 25ವರ್ಷವಾಯಿತು. ಆ ಇಪ್ಪತ್ತೈದು ವರ್ಷಗಳಲ್ಲಿ ಮಣ್ಣು ಹೊಯ್ಗೆ ತಿಂದದಕ್ಕಾಗಿ ಅವನಿಗೆ ರೋಗ ತಗಲಿರಲಿಲ್ಲ. ಅವನಿಗೆ ಹೊಟ್ಟೆಯಲ್ಲಿ ಯಾವುದೇ ರೀತಿಯ ನೋವು ಕಾಣಿಸಿಕೊಂಡಿರಲಿಲ್ಲ. ಡಾ. ರಮೇಶ್ ಎನ್ನುವವರು ಹಂಸ್‌ರಾಜ್‌ನ ಈ ಅಭ್ಯಾಸಕ್ಕೆ ವೈಜ್ಞಾನಿಕ ದೃಢೀಕರಣ ಇದೆ ಎನ್ನುತ್ತಾರೆ. ಹಂಸ್‌ರಾಜ್‌ನ ಮೆದುಳು ಅವನಿಗೆ ಮಣ್ಣು ಅಥವಾ ಹೊಯ್ಗೆ ತಿನ್ನಲು ಪ್ರಚೋದನೆ ನೀಡುತ್ತಿದೆ. ಅವನಿಗೆ ಅದನ್ನು ಕರಗಿಸುವಶಕ್ತಿಯನ್ನೂ ನೀಡಿದೆ. ಮಾತ್ರವಲ್ಲ ಡಾ. ರಮೇಶ್ ಹಂಸ್‌ರಾಜ್‌ನ ಈ ಅಭ್ಯಾಸವನ್ನು ಮುಂದಿಟ್ಟು ಸಂಶೋಧನೆಯನ್ನೂ ನಡೆಸಲಾಗುತ್ತಿದೆ ಆ ಬಳಿಕ ಈ ಬಗ್ಗೆ ಸರಿಯಾದ ಮಾಹಿತಿ ಹೇಳಲು ಸಾಧ್ಯ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News