×
Ad

ಅಚ್ಛೇ ದಿನ್ ಕಬ್ ಆಯೇಗಾ ಮೋದೀಜಿ

Update: 2016-02-01 23:28 IST

ದೇಶಾದ್ಯಂತ ಮೋದಿಯ ಧ್ಯೇಯ ಧೋರಣೆಯಂತೆ ಅಚ್ಛೇ ದಿನ್ ಭಾರತೀಯ ಪ್ರಜೆಗೆ ಯಾವಾಗ ಬರುತ್ತದೆ ಎಂಬುದರ ಬಗ್ಗೆ ಮಾತುಕತೆಯಲ್ಲಿ ವ್ಯಕ್ತಪಡಿಸಿದರೆ, ಇನ್ನು ಕೆಲವು ವಿಷಯಗಳು ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ. ಆದರೆ ಸದ್ಯಕ್ಕೆ ‘ಅಚ್ಛೆ ದಿನ್’ ಬರುವ ಹಾಗೆ ಕಾಣಿಸುತ್ತಿಲ್ಲ. ಇದು ಭಾರೀ ಬೊಗಳೆ ಮಾತಿನಂತೆ ಭಾಸವಾಗುತ್ತಿದೆ.

ಇತ್ತೀಚೆಗೆ ಹಿರಿಯ ನಾಗರಿಕರು, ವಿದ್ಯಾರ್ಥಿಗಳ ರೈಲ್ವೆ ಪಾಸು ರಿಯಾಯಿತಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ಅಲ್ಲದೆ ರೋಗಿ, ಕ್ರೀಡಾಳು, ಶೌರ್ಯ ಪ್ರಶಸ್ತಿ ವಿಜೇತರಿಗೂ ನೀಡುವ ರಿಯಾಯಿತಿ-ವಿನಾಯಿತಿಗಳನ್ನು ಕಡಿತಗೊಳಿಸುವ ಚಿಂತನೆ ಭಾರತೀಯ ರೈಲ್ವೆ ಮಾಡಲಿದೆ ಎಂದು ತಿಳಿದು ಬಂದಿದೆ. ಎಷ್ಟೋ ವರ್ಷಗಳಿಂದ ರಿಯಾಯಿತಿ ವಿನಾಯಿತಿಗಳಿಗೆ ಒಮ್ಮೆಲೆ ಕತ್ತರಿ ಹಾಕುವುದೆಂದರೆ ಏನಿದರ ಅರ್ಥ! ಮರ್ಮ? ಭಾರತೀಯ ರೈಲ್ವೆ ತೀವ್ರ ಅರ್ಥಿಕ ಸಂಕಟಕ್ಕೆ ಸಿಲುಕಿರುವ ಕಾರಣ ಹಿರಿಯ ನಾಗರಿಕರಿಗೆ ವಿದ್ಯಾರ್ಥಿಗಳಿಗೆ ಹಾಗೂ ಇನ್ನಿತರಿಗೆ ರಿಯಾಯಿತಿ-ವಿನಾಯಿತಿಯಲ್ಲಿ ಕಡಿತ-ಕತ್ತರಿ ಹಾಕಿದರೆ ಇದೆಲ್ಲಾ ನಮ್ಮ ದುರ್ದೈವವಲ್ಲವೇ? ನಮ್ಮ ಯಾವುದೇ ಸರಕಾರಿ ಸಂಸ್ಥೆ, ಕಾರ್ಖಾನೆ, ಉದ್ಯಮಗಳು ಲಾಭದಲ್ಲಿ ನಡೆದಿವೆಯೇ, ನಡೆಯುತ್ತಿವೆಯೇ? ನಷ್ಟದಲ್ಲಿರುವ ಉದ್ಯಮ ಸಂಸ್ಥೆಗಳೆಲ್ಲ ಮಣ್ಣು ಮುಕ್ಕಿ ಹೋಗಿವೆ. ಭಾರತೀಯ ರೈಲ್ವೆ ಲಾಲೂ ಪ್ರಸಾದ್ ಯಾದವ್ ರೈಲ್ವೆ ಮಂತ್ರಿಯಾಗಿರುವ ವೇಳೆ ಅದೆಷ್ಟೋ ಕೋಟಿ ಆದಾಯ ತಂದಿದೆ. ಆದರೆ ಆನಂತರ ರೈಲ್ವೆ ಇಲಾಖೆಗೆ ಏನು ದರಿದ್ರ ಬಡಿಯಿತು. ಪ್ರಧಾನ ಮಂತ್ರಿ ಮೋದಿಯವರೇ ನೀವು ಭಾರತದ ಚುಕ್ಕಾಣಿ ಹಿಡಿದ ನಂತರ ಷೇರು ವಹಿವಾಟಿನಲ್ಲಿ ತುಂಬಾ ನಷ್ಟವಾಗಿ ಈಗ ಸೆನ್ಸೆಕ್ಸ್ 24, 000ದ ತನಕದ ಕನಿಷ್ಠ್ಟ ಮಟ್ಟಕ್ಕೆ ಇಳಿದಿದೆ. ಈಗ ಹಿರಿಯ ನಾಗರಿಕರ ಮೇಲೆ ಗದಾಪ್ರಹಾರ ಮಾಡಲು ಹೊರಟಿರುವುದು ನ್ಯಾಯವೇ? ನಿಮ್ಮ ಅಚ್ಛೆ ದಿನ್ ಕಲ್ಪನೆ-ಭಾವನೆಗೆ ಅಂತ್ಯ ಹಾಡಿ.
 

Writer - -ಜೆ.ಎಫ್.ಡಿ’ ಸೋಜ, ಅತ್ತಾವರ

contributor

Editor - -ಜೆ.ಎಫ್.ಡಿ’ ಸೋಜ, ಅತ್ತಾವರ

contributor

Similar News