×
Ad

ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ಇಲ್ಲವೇ?

Update: 2016-02-01 23:29 IST

ಕೃಷಿ ಪ್ರಗತಿಯಲ್ಲಿ ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆಯ ಕೊರತೆ ಎದ್ದು ಕಾಣುತ್ತಿದ್ದು, ಬಹುತೇಕ ಕಡೆ ರಸ್ತೆಯ ಇಕ್ಕೆಲಗಳಲ್ಲಿ ದಿನ ನಿತ್ಯ ವಾಹನ ಪಾರ್ಕಿಂಗ್ ಮಾಡಿರುವುದನ್ನು ಕಾಣಬಹುದು. ಇದರಿಂದಾಗಿ ಪಾದಚಾರಿಗಳಿಗೆ ಸುರಕ್ಷಿತವಾಗಿ ನಡೆದಾಡಲು ಸರಿಯಾದ ಫುಟ್‌ಪಾತ್ ವ್ಯವಸ್ಥೆಯೇ ಇಲ್ಲದೆ ಪರದಾಡುವಂತಾಗಿದೆ.
ಮಂಗಳೂರು ನಗರದಲ್ಲಿ ದಿನ ನಿತ್ಯ ವಾಹನಗಳ ಸಂಖ್ಯೆ ಏರುತ್ತಿದ್ದು, ನಗರದ ಕೆಲವು ಬೆರಳೆಣಿಕೆಯ ವಾಣಿಜ್ಯ ಕಟ್ಟಡಗಳನ್ನು ಹೊರತು ಪಡಿಸಿದರೆ ಬೇರೆಲ್ಲಾ ಕಟ್ಟಡಗಳಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ. ಹಾಗೆಯೇ ಹೆಚ್ಚಿನೆಲ್ಲಾ ಅಪಾರ್ಟ್ ಮೆಂಟ್‌ಗಳಲ್ಲಿ ಸಂದರ್ಶಕರಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಫ್ಲ್ಯಾಟ್ ವಿಸಿಟರ್ಸ್‌ಗಳೆಲ್ಲಾ ರಸ್ತೆಗಳಲ್ಲೇ ತಮ್ಮ ವಾಹನಗಳನ್ನಿಟ್ಟು ಹೋಗುತ್ತಾರೆ. ಕೆಲವು ಕಡೆ ನಗರ ಪಾಲಿಕೆಯ ಸ್ಥಳವನ್ನು ಖಾಸಗಿಯವರು ನಿಯಂತ್ರಿಸುತ್ತಿದ್ದಾರೆ.
ನಗರದಲ್ಲಿ ಅಕ್ರಮ ಕಟ್ಟಡಗಳು, ಪಾರ್ಕಿಂಗ್ ಸಮಸ್ಯೆ, ಸಂಚಾರ ಒತ್ತಡ ಹಾಗೂ ಫುಟ್‌ಪಾತ್ ಸಮಸ್ಯೆಗಳು ಪರಿಹಾರವಾಗುವ ಯಾವ ಸೂಚನೆಗಳು ಕಾಣುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಯಾವಾಗ ಮುಕ್ತಿ ದೊರೆಯುತ್ತದೋ ಎಂದು ಇಲ್ಲಿನ ನಾಗರಿಕರು ಪ್ರಶ್ನಿಸುತ್ತಿದ್ದಾರೆ.
 

Writer - -ಫೌಝಿಯಾ, ಮಂಗಳೂರು

contributor

Editor - -ಫೌಝಿಯಾ, ಮಂಗಳೂರು

contributor

Similar News