ಭಾರತ -ಅಫ್ಘಾನಿಸ್ತಾನ ರಾಯಭಾರಿಗಳಿಗೆ ಇನ್ನು ವೀಸಾ ಉಚಿತ !

Update: 2016-02-01 18:18 GMT

 ಹೊಸದಿಲ್ಲಿ, ಫೆ.1: ಇನ್ನು ಮುಂದೆ ಭಾರತ ಮತ್ತು ಅಫ್ಘಾನಿಸ್ತಾನದ ರಾಯಭಾರಿಗಳಿಗೆ ಉಭಯ ದೇಶಗಳಲ್ಲಿ ವೀಸಾ ಉಚಿತ. ಭಾರತ ಮತ್ತು ಅಫ್ಘಾನಿಸ್ತಾನ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

  ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಆಗಮಿಸಿರುವ ಅಫ್ಘಾನಿಸ್ತಾನದ ಸಚಿವ ಸಂಪುಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಅಬ್ದುಲ್ಲ ಇಂದು ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದರು.
 ಐದು ದಿನಗಳ ಭೇಟಿಗೆ ರವಿವಾರ ಭಾರತಕ್ಕೆ ಆಗಮಿಸಿರುವ ಡಾ. ಅಬ್ದುಲ್ಲ ಅವರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಲಿದ್ದಾರೆ. ಡಾ. ಅಬ್ದುಲ್ಲ ಮಂಗಳವಾರ ಜೈಪುರದಲ್ಲಿ ಏರ್ಪಡಿಸಲಾಗಿರುವ ಭಯೋತ್ಪಾದನಾ ನಿಗ್ರಹಕ್ಕೆ ಸಂಬಂಧಿಸಿದ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ.
  ಕಳೆದ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿ ಅಲ್ಲಿನ ಪಾರ್ಲಿಮೆಂಟ್ ಭವನದ ಕಟ್ಟಡವನ್ನು ಉದ್ಘಾಟಿಸಿದ್ದರು. ಪ್ರಧಾನಿ ಮೋದಿ ಭೇಟಿಯ ಬಳಿಕ ಅಫ್ಘಾನಿಸ್ತಾನ ಸರಕಾರ ಭಾರತದೊಂದಿಗೆ ತನ್ನ ಸಂಬಂಧವನ್ನು ಇನಷ್ಟು ಬಲಪಡಿಸಲು ಹೆಚ್ಚಿನ ಆಸಕ್ತಿ ವಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News