ಮಹಾರಾಷ್ಟ್ರ: 13 ಮಂದಿ ವಿದ್ಯಾರ್ಥಿಗಳು ಸಮುದ್ರ ಪಾಲು
Update: 2016-02-01 23:49 IST
ಮುಂಬೈ,ಫೆ.1: ಮಹಾರಾಷ್ಟ್ರದ ರಾ ಯ್‌ಗಡ ಜಿಲ್ಲೆಯ ಮುರುಡ್ ಬೀಚ್‌ಗೆ ಪಿಕ್‌ನಿಕ್‌ಗೆ ಆಗಮಿಸಿದ್ದ ಕನಿಷ್ಠ 13 ವಿದ್ಯಾರ್ಥಿಗಳು ಸಮುದ್ರಪಾಲಾದ ದುರಂತ ಘಟನೆ ಸೋಮವಾರ ನಡೆದಿದೆ. ಮೃತಪಟ್ಟ ದುರ್ದೈವಿಗಳು ಪುಣೆಯ ಇನಾಂ ಾರ್ ಕಾಲೇಜ್‌ನ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ. ವಿದ್ಯಾರ್ಥಿಗಳ ತಂಡವು ಬೀಚ್‌ನಲ್ಲಿ ವಿಹರಿಸುತ್ತಿದ್ದ ಸಂದರ್ಭದಲ್ಲಿ, ಕೆಲವರು ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ. ಸಮುದ್ರದಲ್ಲಿ ಕೊಚ್ಚಿಹೋದ ಕನಿಷ್ಠ ನಾಲ್ಕು ವಿದ್ಯಾರ್ಥಿಗಳನ್ನು ಪೊಲೀಸರು ರಕ್ಷಿಸಿದ್ದಾರೆ. ಈವರೆಗೆ ಪೊಲೀಸರು 13 ವಿದ್ಯಾರ್ಥಿಗಳ ಶವವನ್ನು ಪತ್ತೆಹಚ್ಚಿದ್ದಾರೆ. ದುರಂತ ನಡೆದ ಸ್ಥಳದಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆಯೆಂದು ಮೂಲಗಳು ತಿಳಿಸಿವೆ.