×
Ad

ಖಾಸಗಿ ವಲಯದಲ್ಲೂ ಮೀಸಲಾತಿ: ಪಾಸ್ವಾನ್ ಒಲವು

Update: 2016-02-01 23:50 IST

ಮುಂಬೈ, ಫೆ.1: ಖಾಸಗಿ ವಲಯದ ಉದ್ಯೋಗಗಳಲ್ಲಿ ಕೂಡಾ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಸಂಬಂಧ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಭೂಮಿಕೆ ಸೃಷ್ಟಿಸಿದ್ದಾರೆ.

ಸರಕಾರದಿಂದ ಸವಲತ್ತುಗಳನ್ನು ಪಡೆಯುತ್ತಿರುವ ಖಾಸಗಿ ಕಂಪೆನಿಗಳು ದಲಿತರಿಗೆ ಹಾಗೂ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಬೇಕಾಗುತ್ತದೆ ಎಂದು ಲೋಕ ಜನಶಕ್ತಿ ಪಕ್ಷದ ಮುಖಂಡ ಅಭಿಪ್ರಾಯಪಟ್ಟರು. ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಕಲ್ಯಾಣಕ್ಕೆ ನೀಡುವ ರಾಜ್ಯ ಹಾಗೂ ಕೇಂದ್ರ ಅನುದಾನವನ್ನು ಅವರ ಜನಸಂಖ್ಯೆ ಬೆಳವಣಿಗೆಗೆ ಅನುಗುಣವಾಗಿ ಹೆಚ್ಚಿಸಬೇಕಾದ ಅಗತ್ಯವನ್ನೂ ಅವರು ಪ್ರತಿಪಾದಿಸಿದರು. ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, ನ್ಯಾಯಾಂಗದಲ್ಲೂ ಪರಿಶಿಷ್ಟರಿಗೆ ಅಧಿಕ ಪ್ರಾತಿನಿಧ್ಯ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಕೇಂದ್ರದಲ್ಲಿ ಮೋದಿ ಸರಕಾರ ದಲಿತರ ಕಲ್ಯಾಣಕ್ಕೆ ಬದ್ಧವಾಗಿದೆ. ಮುಂಬೈನಲ್ಲಿ ಚೈತನ್ಯಭೂಮಿ ಹಾಗೂ ನಾಗ್ಪುರದಲ್ಲಿ ದೀಕ್ಷಾಭೂಮಿ ಇಷ್ಟರಲ್ಲೇ ಅಭಿವೃದ್ಧಿಗೊಳ್ಳಲಿದೆ. ಅಂಬೇಡ್ಕರ್ ಅವರ 125ನೆ ಜಯಂತಿ ಸಂದರ್ಭದಲ್ಲಿ ಇದು ಆಗುತ್ತಿರುವುದು ಕಾಕತಾಳೀಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News