ಜರ್ಮನಿಯಲ್ಲಿ ಸಿಲುಕಿಕೊಂಡಿರುವ ಭಾರತದ ಮಹಿಳೆಗೆ ಸಚಿವೆ ಸುಷ್ಮಾ ಸಹಾಯಹಸ್ತ

Update: 2016-02-03 05:44 GMT

ಹೊಸದಿಲ್ಲಿ, ಫೆ.3: ಜರ್ಮನಿಯಲ್ಲಿ  ತನ್ನ ಮಗಳೊಂದಿಗೆ ಸಿಲುಕೊಂಡಿರುವ ಮಹಿಳೆಯೊಬ್ಬರಿಗೆ ತವರಿಗೆ ಮರಳಲು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್‌ ಸಹಾಯದ ಹಸ್ತ ಚಾಚಿದ್ದಾರೆ.
ಗಂಡನ ಕುಟಂಬದ ಅವಕೃಪೆಗೆ ಒಳಗಾಗಿ ಇದೀಗ ಜರ್ಮನಿಯ ನಿರಾಶ್ರಿತ ಶಿಬಿರದಲ್ಲಿ ತನ್ನ ಏಳು ವರ್ಷದ ಮಗಳೊಂದಿಗೆ ಇರುವ ಮಹಿಳೆ ಗುರುಪ್ರೀತ್‌  ತಾನು ತೊಂದರೆಯಲ್ಲಿರುವ ವಿಚಾರವನ್ನು ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಟ್ವಿಟರ‍್ ಮೂಲಕ ತಿಳಿಸಿದ್ದರು.  ತವರಿಗೆ ವಾಪಸಾಗಲು ಸಹಾಯ ಮಾಡುವಂತೆ   ಅವರು ಕೇಳಿಕೊಂಡಿದ್ದರು.
ಮಹಿಳೆಯ ಮನವಿಗೆ ಸ್ಪಂದಿಸಿರುವ ಸಚಿವೆ ಸುಷ್ಮಾ ಸ್ವರಾಜ್‌ ಅವರು ಫ್ರಾಂಕ್‌ಫರ್ಟ್‌ನಲ್ಲಿರುವ ಭಾರತದ ದೂತವಾಸದ ಅಧಿಕಾರಿಗಳನ್ನು ಸಂಪರ್ಕಿಸಿ ಮಹಿಳೆಯ ಸಮಸ್ಯೆಯನ್ನು ಬಗೆಹರಿಸಲು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News