ಫ್ರಾನ್ಸ್‌ನಲ್ಲಿ ಸಿಖ್ ಪೇಟಾಕ್ಕೆ ವಿರೋಧವಿಲ್ಲ: ಬುರ್ಖಾಕ್ಕೆ ವಿರೋಧವಿದೆ!
ಪ್ಯಾರಿಸ್: ಫ್ರಾನ್ಸ್‌ನಲ್ಲಿ ತಮ್ಮ ಹಕ್ಕುಗಳಿಗಾಗಿ ಸಿಖ್ ಸಂಘಟನೆಯೊಂದು ನಡೆಸಿದ್ದ ಪ್ರತಿಭಟನೆಯ ನಂತರ ಫ್ರಾನ್ಸ್‌ನಲ್ಲಿ ಸಾರ್ವಜನಿಕವಾಗಿ ಸಿಖ್ ಸಮುದಾಯದವರು ಪೇಟಾ ಧರಿಸಬಹುದು ಎಂಬ ಹೇಳಿಕೆಯನ್ನು ಹೊರಡಿಸಲಾಗಿದೆ.
ಹೇಳಿಕೆಯಲ್ಲಿ ಫ್ರಾನ್ಸ್ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ಧರ್ಮಾಧಾರಿತವಾಗಿ ಭೇದಭಾವ ಮಾಡುವುದಿಲ್ಲ ಎಂದು ತಿಳಿಸಿದೆ. ಸಿಖ್‌ರು ಧರಿಸುವ ಪೇಟಾಕ್ಕೆ ಯಾವ ನಿಷೇಧವೂ ಇಲ್ಲ.
ಈ ವಿಚಾರದಲ್ಲಿ ಫ್ರಾನ್ಸ್‌ನ ಕಾನೂನು ಬಹಳ ಸ್ಪಷ್ಟವಾಗಿದೆ. ಎಲ್ಲ ಧಾರ್ಮಿಕ ಪ್ರತೀಕಗಳಿಗೂ ಈ ಕಾನೂನು ಅನ್ವಯವಾಗುತ್ತದೆ ಎಂದು ಹೇಳಲಾಗಿದೆ. ರಾಯಭಾರಿ ಕಚೇರಿ ಹೊರಡಿಸಿರುವ ಹೇಳಿಕೆಯಲ್ಲಿ " ಸರಕಾರಿ ಶಾಲೆಗಳ ಪರಿಸರದಹೊರಗೆ ಸಾರ್ವಜನಿಕ ಸ್ಥಳಗಳಲ್ಲಿ ಸಿಖ್ ಪೇಟಾ ಧರಿಸಲು ಪೂರ್ಣ ಸ್ವಾತಂತ್ರ್ಯವಿದೆ.
ಭದ್ರತೆಯ ದೃಷ್ಟಿಯಲ್ಲಿ ಬುರ್ಕಾಕ್ಕೆ ಮಾತ್ರ ನಿಷೇಧವಿದೆ ಎಂದೂ ಸ್ಪಷ್ಟಪಡಿಸಲಾಗಿದೆ. ಫ್ರಾನ್ಸ್‌ನಲ್ಲಿ ಸಿಖ್‌ರ ಪೇಟಾಧರಿಸುವ ಕಾರಣಕ್ಕೆ ಯಾರೂ ಅಪಮಾನಿಸಿದ ಮತ್ತು ದಾರ್ಮಿಕ ಸ್ಥಳಗಳಲ್ಲಿ ಅಂತಹ ಘಟನೆ ನಡೆದ ವರದಿಯಾಗಿಲ್ಲ.