ದೇಹದಲ್ಲಿ ಊತವಿರುವ ಜಾಗಕ್ಕೆ ಔಷಧಿ ಕೊಂಡೊಯ್ಯುವ ಸಲಕರಣೆ ಕಂಡು ಹಿಡಿದ ಸೌದಿಯ ರಸಾಯನ ಶಾಸ್ತ್ರಜ್ಞೆ
Update: 2016-02-03 14:30 IST
ಜಿದ್ದಾ, ಫೆ.3: ಸೌದಿಯ ರಸಾಯನ ಶಾಸ್ತ್ರಜ್ಞೆಯೊಬ್ಬರು ಮಾನವನ ದೇಹದಲ್ಲಿ ಊತವಿರುವ ಜಾಗಕ್ಕೆ ಔಷಧಿಯನ್ನು ಕೊಂಡೊಯ್ಯುವ ನೂತನ ಸಲಕರಣೆಯನ್ನು ಕಂಡು ಹಿಡಿದಿದ್ದಾರೆ.
39ರ ಹರೆಯದ ಘಾದಾ ಮುತ್ಲಾಕ್ ಅಲ್-ಮುತಾರಿ ಎಂಬವರು ಹೊಸ ಸಲಕರಣೆಯನ್ನು ಕಂಡು ಹಿಡಿಯುವ ಮೂಲಕ ಭಾರೀ ಯಶಸ್ಸು ಗಳಿಸಿದ್ದಾರೆ.
ಇವರು ಕಂಡು ಹಿಡಿದಿರುವ ಸಲಕರಣೆಯನ್ನು ಅಮೆರಿಕ ಕಾಂಗ್ರೆಸ್ 2012 ರಲ್ಲಿ ಜಗತ್ತಿನ ನಾಲ್ಕು ಪ್ರಮುಖ ಆವಿಷ್ಕಾರಗಳಲ್ಲಿ ಒಂದೆಂದು ಗುರುತಿಸಿತ್ತು.
ನೂತನ ಸಲಕರಣೆಯು ದೇಹದಲ್ಲಿ ಊತ ಪತ್ತೆ ಹಚ್ಚಿ ಅಲ್ಲಿಗೆ ನ್ಯಾನೊ ಕ್ಯಾಪ್ಸೊಲ್ ಗಳನ್ನು ಕಳುಹಿಸಿ ಚಿಕಿತ್ಸೆ ನೀಡುತ್ತದೆ ಎಂದು ಅಲ್ ಮುತಾರಿ ತಿಳಿಸಿದ್ದಾರೆ.
ಅಮೆರಿಕದಲ್ಲಿ ಕಣ್ಣು ಮತ್ತು ಸಂಧಿವಾತ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಈ ಸಲಕರಣೆ ಯಶಸ್ವಿಯಾಗಿದೆ.
ಪ್ರಸ್ತುತ ಅಮೆರಿಕದಲ್ಲಿ ನೆಲೆಸಿರುವ ಅಲ್-ಮುತಾರಿ ಅವರು ಕ್ಯಾಲಿಪೋರ್ನಿಯಾ ವಿವಿಯಿಂದ ಕೆಮಿಕಲ್ ಎಂಜಿನಿಯರಿಂಗ್ ನಲ್ಲಿ ಡಾಕ್ಟರೇಟ್ ಪದವಿ ಪಡೆದವರು.