×
Ad

22ವರ್ಷದ ಯುವತಿಯೊಂದಿಗೆ ಮದುವೆಗೆ ಸರಕಾರಿ ನೆರವು ಕೋರಿದ 70ವರ್ಷದ ಮುದುಕ!

Update: 2016-02-03 18:18 IST

ಹರ್‌ದಾ:ಮಧ್ಯಪ್ರದೇಶದ ಹರ್‌ದಾಜಿಲ್ಲೆಯಲ್ಲಿ ಎಪ್ಪತ್ತು ವರ್ಷದ ಬಡ ಮುದುಕನೊಬ್ಬ ಇಪ್ಪತ್ತೆರಡು ವರ್ಷದ ಯುವತಿಯನ್ನು ಪ್ರೀತಿಸಿರುವ ರೋಚಕ ಪ್ರಕರಣ ಬಹಿರಂಗಕ್ಕೆಬಂದಿದೆ. ಅವರು ಭಾರಿ ಗೌಜಿಯಲ್ಲಿ ಆ ಯುವತಿಯೊಂದಿಗೆ ಮದುವೆ ಮಾಡಿಕೊಳ್ಳಲು ಬಯಸುತ್ತಿದ್ದಾರೆ. ಆದರೆ ಅವರ ಆರ್ಥಿಕ ಪರಿಸ್ಥಿತಿ ಅಷ್ಟೇನು ಉತ್ತಮವಾಗಿಲ್ಲ. ಜಿಲ್ಲಾಧಿಕಾರಿಯ ಕಾರ್ಯಾಲಯದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮನವಿ ಸಲ್ಲಿಸಿ ತನ್ನ ಮದುವೆಗೆ ನೆರವಾಗಲು ಕೋರಿಕೆ ಇಟ್ಟಿದ್ದಾರೆ. ಇದು ಮಂಗಳವಾರದಂದು ಜನಸಂಪರ್ಕ ಸಭೆಯಲ್ಲಿ ಕಾಣಿಸಿಕೊಂಡ ಒಂದು ಪ್ರಕರಣ!

ಅಪರ ಜಿಲ್ಲಾಧಿಕಾರಿ ಗಣೇಶ್ ಶಂಕರ್ ಮಿಶ್ರ ಜನಸಂಪರ್ಕ ಕಾರ್ಯಕ್ರಮ ನಡೆಸುತ್ತಿದ್ದರು. ಆಗ ಹರ್‌ದಾ ದೂದ್ ಡೈರಿ ಪ್ರದೇಶದಲ್ಲಿ

ವಾಸಿಸುತ್ತಿರುವ ರಾಜರಾಂ(70) ಸರಕಾರಿ ಸಹಾಯಕ್ಕಾಗಿ ಮನವಿ ಸಲ್ಲಿಸಿದ್ದಾರೆ. ರಾಜರಾಮ್‌ರ ಪತ್ನಿಹತ್ತು ವರ್ಷದ ಹಿಂದೆ ಮೃತರಾಗಿದ್ದರು. ಈಗ ಅವರಿಗೆ 22ವರ್ಷದ ಯುವತಿಯೊಂದಿಗೆ ಪ್ರೇಮಾಂಕುರವಾಗಿದೆ! ಇವರಿಗೆ 70ವರ್ಷ ಹುಡುಗಿಗೆ 22 ವರ್ಷ!

  ಯುವತಿ ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂದಿರುವ ಅವರು ತಾವಿಬ್ಬರೂ ಮದುವೆಯಾಗಲು ಬಯಸಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಆದರೆ ರಾಜರಾಮ್ ಬಳಿ ಹಣವಿಲ್ಲ. ಸರಕಾರ ಅವರಿಗೆ ನೆರವಾಗಬೇಕೆಂದು ಅವರು ಬಯಸುತ್ತಿದ್ದಾರೆ. ಅಪರಜಿಲ್ಲಾಧಿಕಾರಿ ಗಣೇಶ್ ಶಂಕರ್ ಮಿಶ್ರ ರಾಜರಾಮ್‌ರಿಂದ ಇಂತಹ ಮನವಿ ಸಿಕ್ಕಿರುವುದನ್ನು ಸಮ್ಮತಿಸಿದ್ದಾರೆ. ವಿನಂತಿಯನ್ನು ಪರಿಶೀಲಿಸಿ ಉಚಿತ ಕ್ರಮಕೈಗೊಳ್ಳಲಾಗುವುದೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News