×
Ad

ಈತ ಪುಟ್ಟ ಚೆಸ್ ಚಾಂಪಿಯನ್

Update: 2016-02-03 18:41 IST

ಠಿಯೋಗ್: ಇಲ್ಲಿನ ದೇವರಿಘಾಟ್ ಪಂಚಾಯತ್ ವ್ಯಾಪ್ತಿಯ ಚೀಚಿ ಎಂಬಲ್ಲಿನ ಸೂರ್ಯಂಶ್ ವರ್ಮಾ ಚೆಸ್‌ನಲ್ಲಿ ಚೆಸ್ ಇತಿಹಾಸ ರಚಿಸಿದ್ದಾನೆ. ಸೂರ್ಯಂಶ್ ಚಂಡಿಗಡದಲ್ಲಿ ಆಯೋಜಿಸಲಾದ ಸ್ಪರ್ಧೆಯೊಂದರಲ್ಲಿ ಉತ್ಕೃಷ್ಟ ಪ್ರದರ್ಶನ ನೀಡುವ ಮೂಲಕ ಅಂತಾರಾಷ್ಟ್ರೀಯ ರೇಟೆಡ್ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾನೆ. 1077 ಅಂತಾರಾಷ್ಟ್ರೀಯ ರೇಟೆಡ್ ಅಂಕಗಳನ್ನು ಗಳಿಸಿದ್ದಾನೆ. ಟಿಯೋಗ್‌ನ ಹಿಮಾಲಯ ಪಬ್ಲಿಕ್ ಸ್ಕೂಲ್‌ನ ಐದನೆ ತರಗತಿಯ ಈ ಹುಡುಗನಿಗೆ ಕೇವಲ 10ವರ್ಷ 2 ತಿಂಗಳು. ಹಿಮಾಚಲ ಪ್ರದೇಶದ ಅತಿಕಡಿಮೆ ವಯಸ್ಸಿನ ಅಂತಾರಾಷ್ಟ್ರೀಯ ಆಟಗಾರ ಎಂಬ ಹೆಮ್ಮೆಗೆ ಪಾತ್ರನಾಗಿದ್ದಾನೆ. ಸೂರ್ಯಂಶ್‌ನ ಈ ಸಾಧನೆಗಾಗಿ ದೇವರಿಘಾಟ್ ಪಂಚಾಯತ್‌ನ ಪ್ರಧಾನ ಸುರೇಶ್ ವರ್ಮಾ, ಉಪಪ್ರಧಾನ ಪ್ರದೀಪ್ ಖಾಚಿ ಹಾಗೂ ಪಂಚಾಯತ್‌ನ ಎಲ್ಲ ಸದಸ್ಯರು ಅಭಿನಂದಿಸಿದ್ದಾರೆ. ಹಿಮಾಲಯ್ ಪಬ್ಲಿಕ್ ಸ್ಕೂಲ್‌ನ ಪ್ರಧಾನಾಧ್ಯಾಪಕರಾದ ಮನುಪ್ರಕಾಶ್ ಮತು ಸ್ಕೂಲ್‌ನ ಅಧ್ಯಾಪಕರು ಈ ಪುಟಾಣಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News