ಝಿಕಾ ವೈರಸ್ ಲೈಂಗಿಕ ಸಂಬಂಧಗಳಿಂದಲೂ ಹರಡುತ್ತಿದೆ : ಡಾ. ಟಾಮ್ ಫ್ರೀಡನ್
ಮಿಯಾಮಿ: ಲೈಂಗಿಕ ಸಂಬಂಧದಲ್ಲಿ ಕೂಡ ಝಿಕಾ ವೈರಸ್ ಹರಡಬಹುದೆಂದು ಅಮೆರಿಕದ ಆರೋಗ್ಯಾಧಿಕಾರಿಯೊಬ್ಬರು ಹೇಳಿದ್ದಾರೆ. ಶಿಶುಗಳ ಮೆದುಳು ವಿಕಾರಗೊಳ್ಳುವ ಈ ರೋಗ ತೀವ್ರಗತಿಯಲ್ಲಿ ಹರಡುತ್ತಿರುವ ಈ ಸಂದರ್ಭದಲ್ಲಿ ಅಧಿಕಾರಿಕಾರಿಯ ಈ ಹೇಳಿಕೆ ಬಹಳ ರೋಗ ಹರಡುವಿಕೆಯ ಬಹಳ ಗಂಭೀರ ಪರಿಸ್ಥಿತಿಯನ್ನು ಸೂಚಿಸುತ್ತಿದೆ. ಅವರು ತನ್ನ ಬಳಿ ಲೈಂಗಿಕ ಸಂಬಂಧಗಳಿಂದ ಸಂಕ್ರಮಣಗೊಳ್ಳುತ್ತದೆ ಎಂಬುದಕ್ಕೆ ಪ್ರಬಲ ಪುರಾವೆ ಇದೆ ಎಂದಿದ್ದಾರೆ. ಅಮೆರಿಕ ಕೆನಡಾ ಮತ್ತು ಯುರೋಪ್‌ನಲ್ಲಿ ಈ ರೋಗ ಪೀಡಿತ ಪ್ರದೇಶಗಳಿಗೆ ಪ್ರವಾಸ ಹೋಗಿ ಬಂದವರಲ್ಲಿ ಪತ್ತೆಯಾಗಿರುವುದನ್ನು ಅವರು ಬೊಟ್ಟು ಮಾಡುತ್ತಾರೆ.
ಡಲ್ಲಾಸ್ ಕೌಂಟಿಯಲ್ಲಿ ಈ ವರ್ಷ ವೈರಸ್ ಪೀಡಿತ ದೇಶಕ್ಕೆ ಪ್ರವಾಸ ಹೋಗಿ ಬಂದ ವ್ಯಕ್ತಿಯೊಬ್ಬನೊಂದಿಗೆ ಲೈಂಗಿಕ ಸಂಬಂಧವೇರ್ಪಟ್ಟ ಕಾರಣ ಈ ವೈರಸ್ ಹರಡಿರುವುದು ಪರೀಕ್ಷೆಯಿಂದ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಶನ್‌ನ ನಿರ್ದೇಶಕ ಡಾ. ಟಾಮ್ ಫ್ರೀಡನ್‌ರು ಈ ವಿಷಯವನ್ನು ಮಂಗಳವಾರ ಇಮೈಲ್ ಮೂಲಕ ಸೂಚಿಸಿದ್ದಾರೆ.ವೆನೆಜುವೆಲಾದಿಂದ ಅಮೆರಿಕಕ್ಕೆ ಮರಳಿದ ವ್ಯಕ್ತಿಗಳಲ್ಲಿ ಝಿಕಾ ವೈರಸ್ ಕಾಣಿಸಿಕೊಂಡ ಎರಡನೆ ಪ್ರಕರಣ ಅಮೆರಿಕದಲ್ಲಿ ವರದಿಯಾಗಿದೆ.