×
Ad

ಬೆವರು ನಿರೋಧಕಗಳಿಂದ ವೈರಸ್‌ಗಳ ಬೆಳವಣಿಗೆ

Update: 2016-02-03 22:00 IST

ವಾಶಿಂಗ್ಟನ್, ಫೆ. 3: ಬೆವರಿನ ವಾಸನೆಯನ್ನು ಹೋಗಲಾಡಿಸುವ ಸುಗಂಧ ದ್ರವ್ಯಗಳು ಅಥವಾ ಬೆವರಿನ ಉತ್ಪಾದನೆಯನ್ನು ಕಡಿಮೆ ಮಾಡುವ ಬೆವರು ನಿರೋಧಕಗಳನ್ನು ಹಾಕಿಕೊಂಡು ನಾವು ಸಂಭ್ರಮಿಸುತ್ತೇವೆ. ಆದರೆ, ಇವುಗಳು ರೋಗಕಾರಕ ಬ್ಯಾಕ್ಟೀರಿಯಗಳಿಂದ ನಮ್ಮನ್ನು ರಕ್ಷಿಸುವ ಕೆಲವೊಂದು ಚರ್ಮದ ಸೂಕ್ಷ್ಮಾಣು ಜೀವಿಗಳನ್ನೇ ನಾಶಪಡಿಸುತ್ತವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.


ಅಧ್ಯಯನದಲ್ಲಿ ಪಾಲ್ಗೊಳ್ಳಲು ಸಂಶೋಧಕರು 17 ಸ್ವಯಂಸೇವಕರನ್ನು ನಿಯೋಜಿಸಿದರು. ದಿನಗಳೆದಂತೆ, ಈ ಉತ್ಪನ್ನಗಳನ್ನು ಬಳಸಿದ ಸ್ವಯಂಸೇವಕರ ಚರ್ಮದಲ್ಲಿರುವ ಸೂಕ್ಷ್ಮಾಣು ಜೀವಿಗಳ ಸಂಖ್ಯೆಯಲ್ಲಿ ಕಡಿತವಾಗುತ್ತಿರುವುದನ್ನು ದಾಖಲಿಸಲಾಗಿದೆ ಎಂದು ನಾರ್ತ್ ಕ್ಯಾರಲೈನ ಸೆಂಟ್ರಲ್ ವಿಶ್ವವಿದ್ಯಾಲಯದಲ್ಲಿ ಅಸೋಸಿಯೇಟ್ ಸಂಶೋಧನಾ ಪ್ರೊಫೆಸರ್ ಆಗಿರುವ ಜೂಲೀ ಹೋರ್ವತ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News