ಜನತೆಗೆ ನ್ಯಾಯ ಸಿಗುವುದು ಯಾವಾಗ?
ದೇಶದ 24 ಹೈಕೋರ್ಟ್‌ಗಳಲ್ಲಿ ಒಟ್ಟು 1044 ನ್ಯಾಯಾಧೀಶರಿರಬೇಕಾಗಿದ್ದು 601 ನ್ಯಾಯಾಧೀಶರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು 443 ಹುದ್ದೆಗಳು ಭರ್ತಿಯಾಗದೆ ಖಾಲಿಯುಳಿದಿವೆ ಎಂದರೆ ಏನಿದರ ಅರ್ಥ? 30-40 ಹುದ್ದೆ ಖಾಲಿ ಇದ್ದರೆ ತಡೆದುಕೊಳ್ಳಬಹುದು.
ಆದರೆ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಖಾಲಿ ಉಳಿದಿವೆ ಎಂದರೆ ಜನರಿಗೆ ನ್ಯಾಯ ದೊರೆಯುವುದು ಯಾವಾಗ? ಪ್ರತಿ ಜಿಲ್ಲೆಯಲ್ಲಿ ಪ್ರತಿ ರಾಜ್ಯಗಳಲ್ಲಿ ಲಕ್ಷಾಂತರ- ಕೋಟ್ಯಾಂತರ ಪ್ರಕರಣಗಳು ಬಾಕಿ ಉಳಿದಿವೆ ಎಂದಾಗ ಇವೆಲ್ಲಾ ಕೊನೆಗೊಳ್ಳುವುದು ಯಾವಾಗ ಎಂದು? ಪ್ರಾಯದವರು, ಹಿರಿಯ ನಾಗರಿಕರಿಗೆ ಅವರ ಆಯುಷ್ಯ ಅಂತ್ಯವಾಗುವ ತನಕ ನ್ಯಾಯ ಸಿಗದಿದ್ದರೆ ಏನು ಫಲ?. ಸಲ್ಮಾನ್ ಖಾನ್‌ರಂತಹ ಸೆಲೆಬ್ರಿಟಿಗಳ ‘ಗುದ್ದೋಡು’, ಕೃಷ್ಣ ಮೃಗ ಕೊಂದ ಪ್ರಕರಣಗಳೇ ಹತ್ತಾರು ವರ್ಷ ಗಳಿಂದ ಕೋರ್ಟಿನಲ್ಲಿ ಕೊಳೆತು ನಾರುತ್ತಿರುವಾಗ ಬಡವರಿಗೆ ಒಂದೆರಡು ವರ್ಷದೊಳಗೆ ನ್ಯಾಯ ಸಿಗದಿದ್ದರೆ ಮತ್ತೇಕೆ ಈ ಕೋರ್ಟ್ ವ್ಯವಸ್ಥೆ? ಮೋದಿ ಸರಕಾರ ಏನು ಮಾಡುತ್ತಿದೆ.
ಹೈಕೋರ್ಟ್‌ನಲ್ಲಾಗಲಿ ಇನ್ನಿತರ ಕೋರ್ಟಿನಲ್ಲಾಗಲಿ ಬಾಕಿ ಉಳಿದಿರುವ ನ್ಯಾಯಾಧೀಶರ ನೇಮಕ ತ್ವರಿತವಾಗಿ ಮಾಡಲಿ. ಜನತೆಗೆ ಬೇಗ ನ್ಯಾಯ ದೊರಕಿಸಿಕೊಡಲಿ ಹೀಗೆ ನ್ಯಾಯ ಸಿಗದಲ್ಲಿ ಬಡಜನರಿಗೆ ‘ಅಚ್ಛೆ ದಿನ್’ ಬರುವುದು ಯಾವಾಗ?