×
Ad

ಗಿರ್‌ಗಾಂವ್‌ನಲ್ಲಿ ಮೇಕ್ ಇನ್ ಇಂಡಿಯಾ ಸಮಾವೇಶಕ್ಕೆ ಸುಪ್ರೀಂಕೋರ್ಟ್ ಅಸ್ತು

Update: 2016-02-03 23:50 IST

ಹೊಸದಿಲ್ಲಿ, ಫೆ.3: ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಆರು ದೇಶಗಳ ಮುಖ್ಯಸ್ಥರು ಪಾಲ್ಗೊಳ್ಳುವ ಮೇಕ್ ಇನ್ ಇಂಡಿಯಾ ಅದ್ದೂರಿ ಸಮಾವೇಶಕ್ಕೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿಸಿದೆ.
ಮುಂಬೈನ ಗಿರ್‌ಗಾಂವ್ ಚೌಪಾಟಿಯಲ್ಲಿ ಫೆಬ್ರವರಿ 14ರಂದು ನಡೆಸಲು ಉದ್ದೇಶಿಸಿರುವ ಮೇಳಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಕೋರ್ಟ್, ಮಹಾರಾಷ್ಟ್ರ ಸರಕಾರಕ್ಕೆ ಅನುಮತಿ ನೀಡಿದೆ. ಸುಮಾರು 50 ದೇಶಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದು, ಏಳು ಮಂದಿ ಪ್ರಧಾನಿಗಳು ಇದರಲ್ಲಿ ಬಾಗವಹಿಸಲಿದ್ದಾರೆ.
ಚೌಪಾಟಿ ಸಮಾರಂಭಕ್ಕೆ ಮುಂಬೈ ಹೈಕೋರ್ಟ್ ಅವಕಾಶ ನಿರಾಕರಿಸಿದ್ದನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಮೋದಿ ಹಾಗೂ ಇತರ ಆರು ದೇಶಗಳ ಪ್ರಧಾನಿಗಳು ಈಗಾಗಲೇ ಸಮ್ಮೇಳನದಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಾಲಿವುಡ್ ಕಲಾ ನಿರ್ದೇಶಕರ ಸಹಿತ ಹಲವು ದೊಡ್ಡ ಮೇಳಗಳನ್ನು ಈಗಾಗಲೇ ಆಹ್ವಾನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News