×
Ad

ಕೇಜ್ರಿವಾಲ್‌ರೇ ಆಮ್‌ಆದ್ಮಿಯ ಚಪ್ಪಲಿ ಬಿಡಿ. ಇನ್ನು ಶೂ ಧರಿಸಿ , ಹೀಗೊಂದು ಸಲಹೆ

Update: 2016-02-04 19:12 IST

ಹೊಸದಿಲ್ಲಿ: ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರ ಸರಳತನ ಈಗ ಆಮ್ ಆದ್ಮಿಗೆ ಚುಚ್ಚಲು ಆರಂಭಿಸಿದೆ. ವಿಶಾಖ ಪಟ್ಟಣಂನಿಂದ ಇಂಜಿನಿಯರ್ ಸುಮಿತ್ ಅಗ್ರವಾಲ್ ಎಂಬವರು ಕೇಜ್ರಿವಾಲ್‌ರಿಗೆ ಪತ್ರ ಬರೆದು ಶೂ ಧರಿಸಬೇಕೆಂದು ಸಲಹೆ ನೀಡಿದ್ದಾರೆ.

ಅವರು ಪತ್ರದಲ್ಲಿ364 ರೂಪಾಯಿಯ ಡಿಮಾಂಡ್ ಡ್ರಾಫ್ಟ್ ಕೂಡ ಇರಿಸಿದ್ದಾರೆ. ಪತ್ರದಲ್ಲಿ ಸುಮಿತ್ ಕೇಜ್ರಿವಾಲ್‌ರೇ ಈ ಹಣದಿಂದ ನೀವೊಂದು ಜೊತೆ ಶೂ ಖರೀದಿಸಿ ಧರಿಸಿಬಿಡಿ ಯಾಕೆಂದರೆ ಮುಂದೆ ಪ್ರಮುಖ ಸಮಾರಂಭಗಳಲ್ಲಿ ಚಪ್ಪಲಿ ಧರಿಸಿ ಹಾಜರಾಗಬೇಡಿ ಎಂದು ಸಲಹೆ ಕೊಟ್ಟಿದ್ದಾರೆ. ದಿಲ್ಲಿಯ ಮುಖ್ಯಮಂತ್ರಿ ಸ್ಥಾನಕ್ಕೆ ಸುಮಾರು 2 ಲಕ್ಷ ರೂ. ಸಂಬಳ ಇದೆ. ಆದರೂ ನೀವು ಚಪ್ಪಲಿ ಧರಿಸಿಯೇ ಸಮಾರಂಭಗಳಲ್ಲಿ ಭಾಗವಹಿಸುತ್ತೀರಿ. ಇದು ಸರಿಯಲ್ಲ. ಇಷ್ಟು ಸರಳತನ ಮುಖ್ಯಮಂತ್ರಿಯೊಬ್ಬರಿಗೆ ಸರಿಹೊಂದುವುದಿಲ್ಲ. ನಾನು ಕೂಡ ನಿಮ್ಮಂತೆಯೇ ಮೆಕಾನಿಕಲ್ ಇಂಜಿನಿಯರ್ ಆಗಿರುವೆ. ನಿಮ್ಮಂತೆ ಮಾರ್ವಾಡಿ ಬನಿಯಾ ಆಗಿರುವೆ.ಆದರೆ ನಿಮ್ಮಂತೆ ನನ್ನೊಳಗೆ ಆಮ್ ಆದ್ಮಿಯ ಪ್ರಾಕೃತಿಕ ಆಕರ್ಷಣೆ ಇಲ್ಲ ಎಂದು ಸುಮಿತ್ ಪತ್ರದಲ್ಲಿ ಬರೆದಿದ್ದಾರೆ. ನನ್ನ ಪಟ್ಟಣದಲ್ಲಿ ವೀಕೆಂಡ್‌ಗೆ ಇಂಟರ್‌ನ್ಯಾಶನಲ್ ಪ್ಲೀಟ್ ರಿವ್ಯೆ ಆಯೋಜಿಸಲಾಗಿದೆ. ಇದರಲ್ಲಿ ಅರುವತ್ತು ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ನಿಮ್ಮನ್ನು ಈ ಸಮಾರಂಭಕ್ಕೆ ಕರೆಯುವಂತಾಗಲಿ ಎಂದು ಹಾರೈಸುತ್ತೇನೆ. ಹೀಗಾಗಿ ನಾನು ಈ ಪತ್ರ ಬರೆದಿದ್ದೇನೆ ಎಂದು ಸುಮಿತ್ ತಾನು ಕೇಜ್ರಿವಾಲ್‌ರಿಗೆ ಪತ್ರ ಬರೆದ ಕಾರಣವನ್ನೂ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News