ಮೊದಲ ಏಕದಿನ: ಆಫ್ರಿಕ ವಿರುದ್ಧ ಇಂಗ್ಲೆಂಡ್‌ಗೆ ಜಯ
ಬಟ್ಲರ್ ಬಿರುಗಾಳಿ ಬ್ಯಾಟಿಂಗ್:
ಬ್ಲೋಮ್‌ಫೋಂಟೇನ್(ದ.ಆಫ್ರಿಕ), ಫೆ.4: ಜೋಸ್ ಬಟ್ಲರ್ ಬಾರಿಸಿದ ಮಿಂಚಿನ ಶತಕದ(105 ರನ್, 76 ಎಸೆತ) ಸಹಾಯದಿಂದ ಇಂಗ್ಲೆಂಡ್ ತಂಡ ಆತಿಥೇಯ ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಡಿ/ಎಲ್ ನಿಯಮದಂತೆ 39 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.
ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಇಂಗ್ಲೆಂಡ್ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಆಂಗ್ಲರು ಬಟ್ಲರ್ ಶತಕದ(105 ರನ್, 76 ಎಸೆತ, 11 ಬೌಂಡರಿ, 5 ಸಿಕ್ಸರ್)ಬೆಂಬಲದಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 399 ರನ್ ಗಳಿಸಿತು. ಇದು ಆಫ್ರಿಕದ ವಿರುದ್ಧ ಇಂಗ್ಲೆಂಡ್ ಗಳಿಸಿದ ಗರಿಷ್ಠ ಸ್ಕೋರಾಗಿದೆ.
ಮಳೆಯಿಂದಾಗಿ ಪರಿಷ್ಕತ ಗುರಿ 33.3 ಓವರ್‌ಗಳಲ್ಲಿ 290 ರನ್ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕ ತಂಡ ವಿಕೆಟ್‌ಕೀಪರ್-ದಾಂಡಿಗ ಕ್ವಿಂಟನ್ ಡಿಕಾಕ್ ಬಾರಿಸಿದ ಭರ್ಜರಿ ಶತಕ(ಔಟಾಗದೆ 138, 96 ಎಸೆತ, 12 ಬೌಂಡರಿ, 6 ಸಿಕ್ಸರ್) ಹಾಗೂ ಎಫ್‌ಡು ಪ್ಲೆಸಿಸ್ ಅರ್ಧಶತಕದ(55) ಹೊರತಾಗಿಯೂ 33.3 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 250 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಕೇವಲ 67 ಎಸೆತಗಳಲ್ಲಿ 9ನೆ ಏಕದಿನ ಶತಕ ಸಿಡಿಸಿದ ಡಿಕಾಕ್ ಅವರು ಪ್ಲೆಸಿಸ್‌ರೊಂದಿಗೆ 2ನೆ ವಿಕೆಟ್‌ಗೆ 110 ರನ್ ಜೊತೆಯಾಟ ನಡೆಸಿದರು. ಪ್ಲೆಸಿಸ್ ಔಟಾದ ನಂತರ ನಾಯಕ ಎಬಿ ಡಿವಿಲಿಯರ್ಸ್, ಜೆಪಿ ಡುಮಿನಿ ಹಾಗೂ ರೊಸ್ಸೌ ಬೆನ್ನುಬೆನ್ನಿಗೆ ಔಟಾದ ಕಾರಣ ಆಫ್ರಿಕ ತಂಡಕ್ಕೆ ಗೆಲುವಿನ ಗುರಿ ಕಠಿಣವಾಯಿತು. ಇಂಗ್ಲೆಂಡ್‌ನ ಪರ ಮೊಯೀನ್ ಅಲಿ(3-43) ಯಶಸ್ವಿ ಬೌಲರ್ ಎನಿಸಿಕೊಂಡರು.
ಇಂಗ್ಲೆಂಡ್ 399/9: ಇದಕ್ಕೆ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ತಂಡ ಅಗ್ರ ಕ್ರಮಾಂಕದ ದಾಂಡಿಗರಾದ ಅಲೆಕ್ಸ್ ಹೇಲ್ಸ್(57), ಜೋ ರೂಟ್(52) ಹಾಗೂ ಬೆನ್ ಸ್ಟೋಕ್ಸ್(57) ಬಾರಿಸಿದ ಅರ್ಧಶತಕ, ಬಟ್ಲರ್ ಶತಕದದ ಸಹಾಯದಿಂದ ಬೃಹತ್ ಮೊತ್ತ ಕಲೆ ಹಾಕಿತು.
ದ.ಆಫ್ರಿಕದ ಎಲ್ಲ ಬೌಲರ್‌ಗಳು ದುಬಾರಿಗಳೆನಿಸಿದರು. ಫರ್ಹಾನ್ ಬೆಹಾರ್ದೀನ್ ಹಾಗೂ ಜೆಪಿ ಡುಮಿನಿ ಒಟ್ಟು 93 ರನ್ ಬಿಟ್ಟುಕೊಟ್ಟರು.
ನಂಬರ್ಸ್ ಗೇಮ್
399: ಇಂಗ್ಲೆಂಡ್ ಏಕದಿನ ಕ್ರಿಕೆಟ್‌ನಲ್ಲಿ ಎರಡನೆ ಗರಿಷ್ಠ ಸ್ಕೋರ್ ದಾಖಲಿಸಿತು. 2015ರಲ್ಲಿ ನ್ಯೂಝಿಲೆಂಡ್ ವಿರುದ್ಧ 9 ವಿಕೆಟ್‌ಗೆ 408 ರನ್ ಗಳಿಸಿತ್ತು.
73: ಬಟ್ಲರ್ 73 ಎಸೆತಗಳಲ್ಲಿ ಶತಕ ಪೂರೈಸಿದರು. ಕಳೆದ ವರ್ಷ ದುಬೈನಲ್ಲಿ ಪಾಕಿಸ್ತಾನದ ವಿರುದ್ದ 46 ಎಸೆತಗಳಲ್ಲಿ ಶತಕ ಪೂರೈಸಿದ್ದ ಬಟ್ಲರ್ ಇಂಗ್ಲೆಂಡ್ ಪರ ವೇಗದ ಶತಕ ದಾಖಲಿಸಿದ್ದರು.
5: ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕದ ವಿರುದ್ಧ ಇನಿಂಗ್ಸ್‌ವೊಂದರಲ್ಲಿ 5 ಬಾರಿ 50ಕ್ಕೂ ಅಧಿಕ ಬಾರಿ ಅರ್ಧಶತಕ ಜೊತೆಯಾಟ ನಡೆಸಿತು.
15: ಇಂಗ್ಲೆಂಡ್ ಈ ಪಂದ್ಯದಲ್ಲಿ 15 ಸಿಕ್ಸರ್‌ಗಳನ್ನು ಸಿಡಿಸಿತು. 1: ದಕ್ಷಿಣ ಆಫ್ರಿಕದ ವಿಕೆಟ್‌ಕೀಪರ್ ಕ್ವಿಂಟನ್ ಡಿಕಾಕ್ ಕಿರಿಯ ವಯಸ್ಸಿನಲ್ಲಿ(23 ವರ್ಷ) 2000 ರನ್ ಪೂರೈಸಿದ ಆಫ್ರಿಕದ ಮೊದಲ ಬ್ಯಾಟ್ಸ್‌ಮನ್.
6: ಏಕದಿನದಲ್ಲಿ ಉಭಯ ತಂಡಗಳ ವಿಕೆಟ್‌ಕೀಪರ್‌ಗಳು ಶತಕ ಸಿಡಿಸಿದ್ದು ಇದು ಆರನೆ ದೃಷ್ಟಾಂತ. ಇಂಗ್ಲೆಂಡ್‌ನ ಬಟ್ಲರ್ ಹಾಗೂ ಆಫ್ರಿಕ ಡಿಕಾಕ್ ಶತಕ ಸಿಡಿಸಿದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್: 50 ಓವರ್‌ಗಳಲ್ಲಿ 399/9
(ಜೋಸ್ ಬಟ್ಲರ್ 105, ಅಲೆಕ್ಸ್ 57,ಸ್ಟೋಕ್ಸ್ 57, ರೂಟ್ 52, ಮೊರಿಸ್ 3-74. ಲ್ಯಾಂಜ್ 2-87, ತಾಹಿರ್ 2-71)
ದಕ್ಷಿಣ ಆಫ್ರಿಕ: 33.3 ಓವರ್‌ಗಳಲ್ಲಿ 250/5
(ಕ್ವಿಂಟನ್ ಡಿಕಾಕ್ ಔಟಾಗದೆ 138, ಪ್ಲೆಸಿಸ್ 55, ಮೊಯೀನ್ ಅಲಿ 3-43)
ಪಂದ್ಯಶ್ರೇಷ್ಠ: ಕ್ವಿಂಟನ್ ಡಿಕಾಕ್.