RCB ತಂಡ ಸೇರಿಕೊಳ್ಳಲು ತುಂಬಾ ಉತ್ಸುಕನಾಗಿದ್ದೇನೆ: ವೆಂಕಟೇಶ ಅಯ್ಯರ್
Update: 2025-12-17 22:49 IST
ವೆಂಕಟೇಶ ಅಯ್ಯರ್ | Photo Credit : PTI
ಅಬುಧಾಬಿ, ಡಿ.17: ಕಳೆದ ವರ್ಷ ಐಪಿಎಲ್ ಮೆಗಾ ಹರಾಜಿನಲ್ಲಿ ಯುವ ಆಲ್‌ರೌಂಡರ್ ವೆಂಕಟೇಶ ಅಯ್ಯರ್ ಅವರನ್ನು ಖರೀದಿಸಲು ಭಾರೀ ಪೈಪೋಟಿ ನಡೆಸಿ ಸೋತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ 7 ಕೋ.ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.
2026ರ ಐಪಿಎಲ್‌ನ ಮಿನಿ ಹರಾಜಿನಲ್ಲಿ ಆರ್‌ಸಿಬಿ ಸೇರಿದ ವೆಂಕಟೇಶ ಅಯ್ಯರ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ‘ನಮಸ್ಕಾರ ಬೆಂಗಳೂರು, ನಾನು ಆರ್‌ಸಿಬಿ ತಂಡವನ್ನು ಸೇರಿಕೊಳ್ಳಲು ತುಂಬಾ ಉತ್ಸುಕನಾಗಿದ್ದೇನೆ. ಆರ್‌ಸಿಬಿ ತಂಡದ ಭಾಗವಾಗಿರುವುದಕ್ಕೆ ಸಂತಸವಾಗುತ್ತಿದೆ. ತಂಡದ ನಿರ್ವಾಹಕರಿಗೆ ಧನ್ಯವಾದಗಳು’ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.
‘ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ಖರೀದಿಸಿದ ಫ್ರಾಂಚೈಸಿ ಹಾಗೂ ತಂಡದ ಮ್ಯಾನೇಜ್‌ಮೆಂಟ್ ಗೆ ಧನ್ಯವಾದಗಳು. ಮುಂದಿನ ಋತುವಿನಲ್ಲಿ ಚಾಂಪಿಯನ್ ತಂಡದ ಭಾಗವಾಗಿ ಆಡುವುದಕ್ಕೆ ತುಂಬಾ ಸಂತೋಷವಾಗುತ್ತಿದೆ, ಪ್ಲೇ ಬೋಲ್ಡ್’ಎಂದು ವೆಂಕಟೇಶ್ ಹೇಳಿದ್ದಾರೆ.