×
Ad

ಮಗಳ ಪಾಲುದಾರರಿಗೆ ಬೇಕಾಬಿಟ್ಟಿ ಭೂಮಿ ನೀಡಿದ ಗುಜರಾತ್ ಸಿಎಂ ಆನಂದಿಬೆನ್‌

Update: 2016-02-05 13:53 IST


ಹೊಸದಿಲ್ಲಿ, ಫೆ.5: ಗುಜರಾತ್‌ ಮುಖ್ಯ ಮಂತ್ರಿ ಆನಂದಿಬೆನ್‌ ಮಗಳು ಅನಾರ‍್ ಜಯೇಶ್ ಪಟೇಲ್‌ ಪಾಲುದಾರರಿಗೆ ಗುಜರಾತ್ ಸರಕಾರ ಬೇಕಾಬಿಟ್ಟಿ ನೂರಾರು ಎಕ್ರೆ ಜಮೀನು ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಗಿರ್ ಸಿಂಹ ಸಂರಕ್ಷಣಾ ವನದ ಬಳಿ 400 ಎಕ್ರೆ  ಭೂಮಿಯನ್ನು  ಅನಾರ‍್ ಜಯೇಶ್ ಪಟೇಲ್‌  ಕಂಪೆನಿಗೆ  ನೀಡಲಾಗಿದೆ.  ಈ ಪೈಕಿ 250 ಎಕ್ರೆ ಜಮೀನನ್ನು ಮಾತ್ರ ಅಧಿಕೃತ ಬೆಲೆಗೆ ನೀಡಲಾಗಿದೆ ಎಂದು ಇಕನಾಮಿಕ್ ಟೈಮ್ಸ್‌ ವರದಿ ಮಾಡಿದೆ.
ಕಂಪೆನಿಯ ಆರ್‌ಒಸಿಯಲ್ಲಿ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಎಂದು ತನ್ನನ್ನು ಘೋಷಿಸಿಕೊಂಡಿರುವ ಅನಾರ‍್ ಜಯೇಶ್ ಪಟೇಲ್‌  ಅವರ  ವೈಲ್ಡ್‌ವುಡ್‌ ರೆಸಾರ್ಟ್ಸ್ ಮತ್ತು ರಿಯಾಲಿಟೀಸ್ 2010-11ರಲ್ಲಿ 250 ಸಾರ್ವಜನಿಕ ಭೂಮಿಯನ್ನು ಮಂಜೂರು ಮಾಡಲಾಗಿತ್ತು.   ವೈಲ್ಡ್‌ವುಡ್‌ ರೆಸಾರ್ಟ್ಸ್ ಪ್ರವರ್ತಕರಾದ ದಕ್ಷೇಶ್ ಶಾ  ಮತ್ತು ಅಮೊಲ್‌  ಶ್ರೀಪಾಲ್‌ ಶೇಟ್‌ ಅವರ ಅನಾರ‍್ ಜಯೇಶ್ ಪಟೇಲ್‌ ಅವರು ಅನಾರ‍್ ಜಯೇಶ್ ಪಟೇಲ್‌  ಸಂಸ್ಥೆಯ ಪಾಲುದಾರರಾಗಿರುತ್ತಾರೆ. ಆನಂದಿಬೆನ್‌ ಕಂದಾಯ ಸಚಿವರಾಗಿದ್ಧಾಗ  ವೈಲ್ಡ್‌ವುಡ್‌ ರೆಸಾರ್ಟ್ಸ್   172ಎಕ್ರೆ ಕೃಷಿ ಭೂಮಿಯನ್ನು ಖರೀದಿಸಿತ್ತು.
ಆನಂದಿಬೆನ್‌ ಮಗಳು ಅನಾರ‍್ ಜಯೇಶ್ ಪಟೇಲ್‌ ಭಾರೀ ಭೂಹಗರಣದಲ್ಲಿ  ಭಾಗಿಯಾಗಿದ್ದರೂ ಸರಕಾರ ಮೌನ ವಹಿಸಿದೆ ಎನ್ನಲಾಗಿದೆ.


:

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News