ಅಹ್ಮದಾಬಾದ್ : " ವೆಲೆಂಟೈನ್ " ಹಬ್ಬಕ್ಕೆ ಸಾಲ ಕೇಳಿದ ಅಧಿಕಾರಿಯ ಅರ್ಜಿ ತಿರಸ್ಕರಿಸಿದ ಬ್ಯಾಂಕ್
ಅಹ್ಮದಾಬಾದ್ , ಫೆ ೫ : ಇಲ್ಲಿನ ಯುವ ಬ್ಯಾಂಕ್ ಅಧಿಕಾರಿಯೊಬ್ಬ ಸಾಲ ಕೇಳುವ ಅರ್ಜಿಯಲ್ಲಿ " ವೆಲೆಂಟೈನ್ " ಹಬ್ಬಕ್ಕೆ ಸಾಲ ಬೇಕು ಎಂದು ಕೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬಿ ಚರ್ಚೆಗೆ ನಾಂದಿ ಹಾಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ತರಬೇತಿಯಲ್ಲಿರುವ ಅಧಿಕಾರಿ , ೨೫ ವರ್ಷ ವಯಸ್ಸಿನ ದಿಗ್ವಿಜಯ್ ಸಿಂಗ್ ೪೨,೯೭೦ ರೂ. ಹಬ್ಬದ ಸಾಲ ಬೇಕು ಎಂದು ಬ್ಯಾಂಕ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹಬ್ಬದ ಜಾಗದಲ್ಲಿ " ವೆಲೆಂಟೈನ್ " ಎಂದು ನಮೂದಿಸಿದ್ದರು. ಆದರೆ ಬ್ಯಾಂಕ್ ಇದನ್ನು ಒಪ್ಪದೆ ಅದು " ಅಮಾನ್ಯ ಹಬ್ಬ" ಎಂದು ಅರ್ಜಿಯನ್ನು ತಿರಸ್ಕರಿಸಿಬಿಟ್ಟಿತು.
ಮತ್ತೆ ಅರ್ಜಿ ಸಲ್ಲಿಸಿದ ದಿಗ್ವಿಜಯ್ ಈ ಬಾರಿ ಹಬ್ಬದ ಹೆಸರು ಬದಲಾಯಿಸಿ "ಬಸಂತ್ ಪಂಚಮಿ" ಎಂದು ಕೊಟ್ಟರು. ಅದನ್ನು ಕೂಡಲೇ ಬ್ಯಾಂಕ್ ಸ್ವೀಕರಿಸಿತು.
"ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಸಿಂಗ್ ನಿರಾಕರಿಸಿದ್ದಾರೆ. ನಾನು ವೆಲೆಂಟೈನ್ ಎಂದು ಕೊಟ್ಟಿದ್ದು ಹೌದು. ಆದರೆ ನಾನು ಸೇರಿದ ವರ್ಷ ಹಾಗು ಯಾವ ವರ್ಷಕ್ಕೆ ಸಾಲ ಕೇಳುತ್ತಿದ್ದೇನೆ ಎಂದು ಬರೆಯಲು ಮರೆತಿದ್ದೆ. ಹಾಗಾಗಿ ಈ ಎಡವಟ್ಟು ಆಗಿದೆ. ಇದನ್ನು ನಾನು ಪ್ರಚಾರಕ್ಕಾಗಿ ಮಾಡಿಲ್ಲ . ಇದಕ್ಕಿಂತ ಹೆಚ್ಚು ಈ ಬಗ್ಗೆ ಮಾತಾಡುವುದಿಲ್ಲ " ಎಂದು ಹೇಳಿದ್ದಾರೆ.