×
Ad

ಹಿಮಪಾತದಲ್ಲಿ 10 ಯೋಧರ ಸಾವನ್ನು ದೃಢಪಡಿಸಿದ ಸರಕಾರ

Update: 2016-02-05 21:52 IST

ಹೊಸದಿಲ್ಲಿ,ಫೆ.5: ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಹಿಮಪಾತಕ್ಕೆ ಸಿಲುಕಿ 10 ಯೋಧರು ಹುತಾತ್ಮರಾಗಿರುವುದನ್ನು ಕೇಂದ್ರ ಸರಕಾರವು ದೃಢಪಡಿಸಿದೆ.

‘‘ಯೋಧರು ಮರಣವನ್ನಪ್ಪಿರುವುದು ಅತ್ಯಂತ ದುಃಖಕರವಾಗಿದೆ. ದೇಶಕ್ಕಾಗಿ ತಮ್ಮ ಪ್ರಾಣಗಳನ್ನು ತ್ಯಾಗ ಮಾಡಿದ ವೀರಯೋಧರಿಗೆ ನನ್ನ ನಮನಗಳು. ಅವರ ಕುಟುಂಬಗಳಿಗೆ ನನ್ನ ಸಂತಾಪಗಳು’’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಯೋಧರ ದುರಂತ ಸಾವಿಗೆ ರಕ್ಷಣಾ ಸಚಿವ ಮನೋಹರ ಪಾರ್ರಿಕರ್ ಅವರೂ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ಕುಟುಂಬಗಳ ಕಾಳಜಿ ವಹಿಸುವುದು ನಮ್ಮ ಕರ್ತವ್ಯವಾಗಿದೆ ಎಂದೂ ಅವರು ಹೇಳಿದ್ದಾರೆ.

 ಫೆ.3ರಂದು ನಸುಕಿನಲ್ಲಿ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಸಂಭವಿಸಿದ ಭಾರೀ ಹಿಮಪಾತದಲ್ಲಿ 19,000 ಅಡಿ ಎತ್ತರದಲ್ಲಿಯ ಅಲ್ಲಿಯ ಸೇನಾನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 10 ಯೋಧರು ನಾಪತ್ತೆಯಾಗಿದ್ದು, ಅವರ ಶೋಧಕ್ಕಾಗಿ ನಡೆಸಿದ ಕಾರ್ಯಾಚರಣೆ ಯಾವುದೇ ಫಲ ನೀಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News