×
Ad

ಗುಜರಾತ್‌ನಲ್ಲಿ ಬಸ್‌ ನದಿಗೆ ಉರುಳಿ 37 ಸಾವು

Update: 2016-02-05 21:53 IST

ಅಹ್ಮದಾಬಾದ್‌, ಫೆ.5: ಗುಜರಾತ್ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸೊಂದು ಉರುಳಿ ಬಿದ್ದ ಪರಿಣಾಮ 37 ಮಂದಿ ಮೃತಪಟ್ಟ ಘಟನೆ ಸಾವ್‌ಸಾರಿ ಜಿಲ್ಲೆಯಲ್ಲಿ ಇಂದು ಸಂಜೆ ಸಂಭವಿಸಿದೆ.
ಸುಮಾರು60 ಪ್ರಯಾಣಿಕರನ್ನು ಹೊತ್ತ  ಬಸ್‌ ಸುಪಾ ಗ್ರಾಮದಲ್ಲಿ ಪೂರ್ಣ ನದಿಗೆ ನಿರ್ಮಿಸಲಾಗಿರುವ ಸೇತುವೆಯನ್ನು ದಾಟುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿ ಬಿತ್ತು ಎನ್ನಲಾಗಿದೆ. . ಪರಿಣಾಮವಾಗಿ 37ಮಂದಿ ಮೃತಪಟ್ಟರು, 24 ಮಂದಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಬಸ್‌ ವಾಸಾರಿ ನಗರದಿಂದ ಉನಾಯ್‌ಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News