×
Ad

ದಿಲ್ಲಿಯ ಯುವಕನಿಗೆ ಬಾಲಪರಾಧಿ ತಿದ್ದುಪಡಿ ಕಾಯ್ದೆಯಡಿ ಸಜೆ ಸಾಧ್ಯತೆ ..!

Update: 2016-02-05 23:25 IST

ಹೊಸದಿಲ್ಲಿ, ಫೆ.5: ಸುಧಾರಣಾ ಗೃಹದಿಂದ ಹೊರ ಬಂದ  ಎರಡು ತಿಂಗಳ ಬಳಿಕ   ವೃದ್ಧೆಯನ್ನು ಕೊಲೈಗೈದು ಬಂಧನಕ್ಕೊಳಗಾಗಿರುವ ದಿಲ್ಲಿಯ ಹದಿನೇಳರ ಹರೆಯದ ಅಪ್ರಾಪ್ತ ಯುವಕ ಕಳೆದ ಡಿಸೆಂಬರ‍್ನಲ್ಲಿ ತಿದ್ದುಪಡಿಯಾದ ಬಾಲಾಪರಾಧಿ ಕಾಯ್ದೆಯಡಿ ಶಿಕ್ಷೆಗೆ ಗುರಿಯಾಗುವ ಮೊದಲ ಬಾಲಪರಾಧಿಯಾಗಲಿದ್ದಾನೆ.
ಈತ  2015, ಸೆಪ್ಟಂಬರ್‌ನಲ್ಲಿ ಹದಿಮೂರರ ಹರೆಯದ   ಬಾಲಕನನ್ನು ತನ್ನ ಸ್ನೇಹಿತೆಯ ಸಹಾಯದಿಂದ   ಅಪಹರಿಸಿ ಕೊಲೆಗೈದಿದ್ದನು. ರಿಯಾಲಿಟಿ ಶೋದಲ್ಲಿ ಭಾಗವಹಿಸಲು ಹಣಕ್ಕಾಗಿ ಬಾಲಕನನ್ನು ಈತ ಕೊಲೆಗೈದಿದ್ದ ಎನ್ನಲಾಗಿದೆ. ಕಳೆದ ಡಿಸೆಂಬರ‍್ನಲ್ಲಿ ಬಾಲ ಸುಧಾರಣಾ ಗೃಹದಿಂದ ಹೊರಬಂದಿದ್ದ ಆರೋಪಿ ಹಣ ಹಾಗೂ ಒಡವೆಗಾಗಿ ವೃದ್ಧೆಯೊಬ್ಬರನ್ನು ಕೊಲೆಗೈದು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಆರೋಪಿಯ ವಯಸ್ಸು 17 ವರ್ಷ ಹಾಗೂ 11 ತಿಂಗಳು ಆಗಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ಬಾಲಾಪರಾಧಿ ಕಾಯ್ದೆಯಡಿ ಕಠಿಣ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News