ದಿಲ್ಲಿಯಲ್ಲಿ ವಿಶ್ವಕಪ್ ಪಂದ್ಯ; ಫೆ.8ಕ್ಕೆ ಅಂತಿಮ ನಿರ್ಧಾರ:ಬಿಸಿಸಿಐ
ಹೊಸದಿಲ್ಲಿ, ಫೆ.5: ಮುಂದಿನ ತಿಂಗಳು ಆರಂಭವಾಗಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಫಿರೋಝ್ ಷಾ ಕೋಟ್ಲಾ ಸ್ಟೇಡಿಯಂ ಸೆಮಿಫೈನಲ್ ಸಹಿತ ನಾಲ್ಕು ಪಂದ್ಯಗಳ ಆತಿಥ್ಯವಹಿಸಿಕೊಳ್ಳಲು ಸಮರ್ಥವಿದೆಯೇ, ಇಲ್ಲವೇ ಎಂಬ ಬಗ್ಗೆ ಫೆ.8 ರಂದು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಬಿಸಿಸಿಐ ಶುಕ್ರವಾರ ಇಲ್ಲಿ ಸ್ಪಷ್ಟಪಡಿಸಿದೆೆ.
‘‘ಬಿಸಿಸಿಐನ ವಿಶೇಷ ವಾರ್ಷಿಕ ಮಹಾಸಭೆ(ಎಸ್‌ಜಿಎಂ) ಫೆಬ್ರವರಿಯ ಮೂರನೆ ವಾರ ನಡೆಯಲಿದೆ. ಅದಕ್ಕೂ ಮೊದಲು ಕೋಟ್ಲಾ ಸ್ಟೇಡಿಯಂ ಐಸಿಸಿ ಟ್ವೆಂಟಿ-20 ವಿಶ್ವಕಪ್ ಪಂದ್ಯಗಳ ಆತಿಥ್ಯವಹಿಸಿಕೊಳ್ಳುವ ಕುರಿತು ನಿರ್ಧರಿಸಲಿದ್ದೇವೆ. ಫೆ.9 ರಿಂದ ವಿಶ್ವಕಪ್‌ನ ಟಿಕೆಟ್ ಮಾರಾಟ ಆರಂಭವಾಗಲಿದೆ’’ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದರು.
ದಿಲ್ಲಿಯಲ್ಲಿ ಮಾರ್ಚ್‌ನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ನಾಲ್ಕು ಪಂದ್ಯಗಳ ಆತಿಥ್ಯವಹಿಸಿಕೊಳ್ಳಬೇಕಾಗಿತ್ತು. ಆದರೆ, ದಿಲ್ಲಿ ಕ್ರಿಕೆಟ್ ಮಂಡಳಿ ಡಿಡಿಸಿಎ ಮಹಾನಗರ ಪಾಲಿಕೆಯಿಂದ ಎನ್‌ಒಸಿ ಪಡೆಯಲು ವಿಫಲವಾಗಿದೆ