×
Ad

ಕ್ರಿಕೆಟಿಗ ಇರ್ಫಾನ್ ಗೆ ಮದುವೆ

Update: 2016-02-06 12:38 IST

ಜಿದ್ದಾ , ಫೆ. ೬ : ಭಾರತದ ಖ್ಯಾತ ಕ್ರಿಕೆಟ್ ಆಟಗಾರ ಇರ್ಫಾನ್ ಪಟ್ಹಾಣ್ ಮಕ್ಕಾದ ಮಸ್ಜಿದುಲ್ ಹರಮ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬುಧವಾರ ವಿವಾಹವಾಗಿದ್ದಾರೆ. ಅವರ ವಧು  ಹೈದರಾಬಾದ್ ಮೂಲದ ಸಫಾ ಬೇಗ್ ಸೌದಿಯ  ಜಿದ್ದಾದಲ್ಲಿ ಹುಟ್ಟಿ ಅಲ್ಲೇ ಬೆಳೆದವರು.

ಇರ್ಫಾನ್ ನ ತಂದೆ ಮಹಮೂದ್ ಪಟ್ಹಾಣ್ , ಸೋದರ ಇನ್ನೊಬ್ಬ ಖ್ಯಾತ ಕ್ರಿಕೆಟಿಗ ಯೂಸುಫ್ ಪಟ್ಹಾಣ್ ಸಹಿತ ಸಮೀಪದ ಸಂಬಂಧಿಗಳು ಮಾತ್ರ ಈ ಸಂದರ್ಭದಲ್ಲಿ ಹಾಜರಿದ್ದರು. 

ಸಫಾ ಬೇಗ್ ಮಾಡೆಲಿಂಗ್ ಹಾಗು ಉಗುರು ಕಲೆ ತಜ್ಞರಾಗಿದ್ದಾರೆ. 

ಮಾರ್ಚ್ ನಲ್ಲಿ ಇರ್ಫಾನ್ ಮುಂಬೈ ಯಲ್ಲಿ ಮದುವೆಯ ಔತಣ ಕೂಟ ಏರ್ಪಡಿಸುವ ಸಾಧ್ಯತೆ ಇದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News