ಸಿಯಾಚಿನ್ ಕಣಿವೆಯಲ್ಲಿ ಹಿಮಕುಸಿತದಿಂದ ರಾಜ್ಯದ ಮೂವರು ಯೋಧರ ಮೃತ್ಯು
Update: 2016-02-06 12:48 IST
ಹೊಸದಿಲ್ಲಿ, ಫೆ.6: ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ಕಣಿವೆಯಲ್ಲಿ ಸಂಭವಿಸಿದ ಹಿಮಕುಸಿತದಿಂದಾಗಿ ಮೃತಪಟ್ಟ ಹತ್ತು ಮಂದಿ ಯೋಧರಲ್ಲಿ ಕರ್ನಾಟಕದ ಮೂವರು ಯೋಧರು ಸೇರಿದ್ದಾರೆ.
ತಮಿಳುನಾಡಿದ ನಾಲ್ವರು , ಕೇರಳ-1, ಮಹಾರಾಷ್ಟ್ರ-1, ಆಂಧ್ರಪ್ರದೇಶದ ಓರ್ವ ಯೋಧ ಮೃತಪಟ್ಟಿರುವುದಾಗಿ ಕೇಂದ್ರ ಸರಕಾರ ಇಂದು ಪ್ರಕಟಿಸಿದೆ.
ಕುಂದಗೋಳ ತಾಲ್ಲೂಕು ಬೆಟದೂರಿನ ಹನುಮಂತಪ್ಪ ಕೊಪ್ಪದ(35), ಎಚ್ ಡಿ ಕೋಟೆ ಹಂಪಾಪುರದ ಯೋಧ ಮಹೇಶ(30) ಹಾಗೂ ಹಾಸನ ಜಿಲ್ಲೆ ತೇಜೂರಿನ ಸುಬೇದಾರ್ ಟಿಟಿ ನಾಗೇಶ್(41) ಮೃತಪಟ್ಟಿರುವ ಯೋಧರು.
ಕಳೆದ 20 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸುಬೇದಾರ್ ಟಿಟಿ ನಾಗೇಶ್ ನಿವೃತ್ತಿಯ ಹಂತದಲ್ಲಿದ್ದರು. ಹನುಮಂತಪ್ಪ ಕೊಪ್ಪದ ಕಳೆದ 14 ವರ್ಷಗಳಿಂದ ಮತ್ತು ಎಚ್ ಡಿ ಕೋಟೆ ಮಹೇಶ್ ಎಂಟು ವರ್ಷಗಳಿಂದ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು.