ನಿರಾಶ್ರಿತರ ವಿರುದ್ಧ ಅಪಪ್ರಚಾರಕ್ಕಿಳಿದ ಜರ್ಮನರಿಗೆ ಮುಖಭಂಗ!
ಪತ್ರಕರ್ತೆಗೆ ಕಿರುಕುಳ ನೀಡಿದ ಜರ್ಮನ್ ಯುವಕರು
ಕೊಲೋನ್:ಜರ್ಮನಿಯಲ್ಲಿ ನಿರಾಶ್ರಿತರನ್ನು ದುರ್ಜನರೆಂದು ಚಿತ್ರಿಸುವ ಪ್ರಯತ್ನ ಬಿರುಸಿನಲ್ಲಿ ನಡೆಯುತ್ತಿರುವಾಗಲೇ ಜರ್ಮನಿಯನ್ನರು ಕೂಡ ಕಮ್ಮಿಯಿಲ್ಲ ಎಂಬಂತಹ ಘಟನೆ ಕೊಲೋನ್‌ನಲ್ಲಿ ನಡೆದಿದೆ. ಹೊಸವರ್ಷ ಆಚರಣೆ ವೇಳೆ ಕೆಲವು ನಿರಾಶ್ರಿತರು ಇಲ್ಲಿಗೆ ದಾಳಿ ಮತ್ತು ಲೈಂಗಿಕ ಕಿರುಕುಳಕ್ಕಿಳಿದಿದ್ದನ್ನು ಮುಂದಿಟ್ಟು ಸಕಲ ನಿರಾಶ್ರಿತರು ಕೆಟ್ಟವರೆಂಬ ವ್ಯಾಪಕ ಅಪಪ್ರಚಾರ ನಡೆಸಲಾಗಿತ್ತು.
ಆದರೆ ಈಗ ಅದೇ ಕೊಲೋನ್‌ನಲ್ಲಿನ ಕಾರ್ನಿವಲ್ ಕುರಿತು ಬೆಲ್ಜಿಯಂನ ಟಿವಿ ಚ್ಯಾನೆಲ್‌ಗೆ ವರದಿ ಮಾಡುತ್ತಿದ್ದ ಯುವತಿಯೊಬ್ಬರಿಗೆ ಜರ್ಮನ್ ಯುವಕರು ಕಿರುಕುಳ ನೀಡುತ್ತಿರುವ ವೀಡಿಯೊ ಈಗ ಬಹಿರಂಗವಾಗಿದ್ದು ಜರ್ಮನಿ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ.
ಬೆಲ್ಜಿಯಂನ ಮೂಲದ ಎಸ್‌ಮೆರಾಲ್ಡ್ ಎಂಬ ವರದಿಗಾರ್ತಿಯನ್ನು ಮೂವರು ಜರ್ಮನ್ ಯುವಕರು ಸೇರಿ ರಸ್ತೆಯಲ್ಲಿಯೇ ಅವಮಾನ ನಡೆಸಿದ್ದಾರೆ. ತನ್ನೊಂದಿಗೆ ರಾತ್ರಿ ಕಳೆಯಲು ಬರು ವೆಯಾ ಎಂದು ಎಸ್‌ಮೆರಾಲ್ಡ್‌ರನ್ನು ಅಪಮಾನಿಸಿದ್ದ. ಲೈವ್‌ವರದಿ ನೀಡುತ್ತಿದ್ದಾಗ ಹಿಂದಿನಿಂದ ಯುವಕರು ಅಸಭ್ಯ ಸಂಜ್ಞೆಗಳನ್ನು ಮಾಡುತ್ತಿರುವುದು ಎಸ್‌ಮೆರಾಲ್ಡ್‌ಗೆ ಗೊತ್ತಾಗಿರಲಿಲ್ಲ.ಆದರೆ ಅದು ಚ್ಯಾನೆಲ್‌ನಲ್ಲಿ ಕಾಣಿಸಿತ್ತು.
ಕಾರ್ನಿವಲ್ ಸ್ಥಳದಲ್ಲಿ ನಿರಾಶ್ರಿತರಿಂದಾಗಬಹುದಾದ ದಾಳಿಯ ಶಂಕೆಯಲ್ಲಿ ಎರಡು ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೂ ವರದಿಗಾರ್ತಿಯನ್ನು ಅವಮಾನಿಸುವಾಗ ತಡೆಯಲು ಅವರು ಅಲ್ಲಿರಲಿಲ್ಲ. ಬೆಲ್ಜಿಯಂ ರೇಡಿಯೊ ಟಿವಿಗಾಗಿ ಕೊಲೋನ್‌ನ ಮಹಿಳಾ ಕಾರ್ನಿವಲ್‌ನ್ನು ಎಸ್‌ಮೆರಾಲ್ಡ್ ವರದಿ ಮಾಡುತ್ತಿದ್ದರು. ಅಲ್ಲಿ ತಾನು ಮತ್ತು ಕ್ಯಾಮರಾ ಮೆನ್ ಮಾತ್ರ ಇದ್ದೆವು. ಆ ಯುವಕರು ಪಾನಮತ್ತರಾಗಿದ್ದರು.
ಯುವಕರ ಹಠಾತ್ ಆಕ್ರಮಣವನ್ನು ಪ್ರತಿರೋಧಿಸಲು ತನ್ನಿಂದ ಸಾಧ್ಯವಾಗಲಿಲ್ಲ. ಯುವಕರಲ್ಲೊಬ್ಬ ಕುತ್ತಿಗೆ ಹಿಂಭಾಗಕ್ಕೆ ಚುಂಬಿಸಿದ್ದಾನೆ. ಇನ್ನೊಬ್ಬ ಅಶ್ಲೀಲವಾಗಿ ಮಾತಾಡಿದ್ದಾನೆ ಎಂದು ಎಸ್‌ಮೆರಾಲ್ಡ್ ಹೇಳಿದ್ದಾರೆ.ಕೊಲೋನ್‌ನಲ್ಲಿ ವಿಮನ್ಸ್ ಡೇ ಆಚರಿಸಲಾಗುತ್ತಿತ್ತು. ಅದರ ನೇರಪ್ರಸಾರ ವರದಿಮಾಡಲು ಮೆಸರಾಲ್ಡ್ ಅಲ್ಲಿಗೆ ಹೋಗಿದ್ದರು.