ಗಾಯಕಿ, ಸಂಗೀತ ಸಂಯೋಜಕಿ ಶಾನ್ ಜಾನ್ಸನ್ ನಿಗೂಢ ಸಾವು
ಚೆನ್ನೈ, ಫೆ.6: ಗಾಯಕಿ ಹಾಗೂ ಸಂಗೀತ ಸಂಯೋಜಕಿ ಶಾನ್ ಜಾನ್ಸನ್ ಚೆನ್ನೈನ ಅಶೋಕ ನಗರದ ಅಪಾರ್ಟ್‌ಮೆಂಟ್‌ನಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದಾರೆ.
ಸಂಗೀತ ನಿರ್ದೇಶಕ ಜಾನ್ಸನ್ ಪುತ್ರಿ ಶಾನ್ ಜಾನ್ಸನ್ ಅವರು ದೂರವಾಣಿ ಕರೆ ಸ್ವೀಕರಿಸದೆ ಇದ್ದಾಗ ಆಕೆಯ ತಾಯಿ ಮತ್ತು ಸಂಬಂಧಿಕರು ಮನೆಗೆ ಬಂದು ಇಂದು ನೋಡಿದಾಗ ಆಕೆ ಸಾವಿಗೀಡಾಗಿರುವ ವಿಚಾರ ಬೆಳಕಿಗೆ ಬಂತು ಎನ್ನಲಾಗಿದೆ.
ತಾಯಿ ಮತ್ತು ಸಂಬಂಧಿಕರು ಬಾಗಿಲು ಒಡೆದು ಮನೆಯ ಒಳ ಪ್ರವೇಶಿಸಿದಾಗ ಶಾನ್ ಜಾನ್ಸನ್ ಮಲಗಿದಲ್ಲೇ ಮೃತಪಟ್ಟಿರುವುದು ಕಂಡು ಬಂತು.
ಶಾನ್ ಜಾನ್ಸನ್ ಆತ್ಮಹತ್ಯೆ ಮಾಡಿಕೊಂಡಿರುವುದು ಸ್ಪಷ್ಟಗೊಂಡಿಲ್ಲ. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
ಕರ್ನಾಟಕ ಮತ್ತು ಪಾಶ್ಚಿಮಾತ್ಯ ಸಂಗೀತದಲ್ಲಿ ಶಾನ್ ಜಾನ್ಸನ್ ತರಬೇತಿ ಪಡೆದಿದ್ದರು. ಮಲಯಾಲಯಂ ಚಿತ್ರರಂಗದಲ್ಲಿ ಸಂಗೀತ ಸಂಯೋಜಕರಾಗಿ ಪ್ರಸಿದ್ದಿ ಪಡೆದಿದ್ದ ಜಾನ್ಸನ್ ಆ.18 ,2011ರಲ್ಲಿ ನಿಧನರಾಗಿದ್ದರು. ಫೆಬ್ರವರಿ 2012ರಲ್ಲಿ ಪುತ್ರ ರೆನ್ ಜಾನ್ಸನ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.