ಕೇಜ್ರಿವಾಲ್ರಿಗೆ ಮಾನವೂ ಇಲ್ಲ ಮರ್ಯಾದೆಯೂ ಇಲ್ಲ: ಹೈಕೋರ್ಟ್ನಲ್ಲಿ ಜೇಟ್ಲಿ
Update: 2016-02-06 14:19 IST
ಹೊಸದಿಲ್ಲಿ: ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಎಸೋಶಿಯೇಶಬ್ (ಡಿಡಿಸಿಎ) ಭ್ರಷ್ಟಾಚಾರ ಕುರಿತು ಮಾನಹಾನಿ ಕಟ್ಲೆ ಹೂಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಶುಕ್ರವಾರ ಹೈಕೋರ್ಟ್‌ನಲ್ಲಿ ಕೇಜ್ರಿವಾಲ್‌ರಿಗೆ ಮರ್ಯಾದೆಯೂ ಇಲ್ಲ, ಚಾರಿತ್ರ್ಯವೂಇಲ್ಲ ಎಂದು ಹೇಳಿದ್ದಾರೆ. ವಿತ್ತ ಸಚಿವರು ಕೇಜ್ರಿವಾಲ್ ಸಹಿತ ಆಪ್‌ನ ಇತರ ಐವರು ನಾಯಕರು ರಾಜಕೀಯ ಲಾಭಕ್ಕಾಗಿ ತನ್ನ ಕುಟುಂಭದ ವಿರುದ್ಧ ಉದ್ದೇಶಪೂರ್ವಕವಾಗಿ ಮಾನಹಾನಿ ಹೇಳಿಕೆಯನ್ನು ನೀಡಿದ್ದಾರೆ.
ಇದಕ್ಕೆ ಮೊದಲು ಜೆಟ್ಲಿ ದಾಖಲಿಸಿರುವ ಮಾನಹಾನಿ ಮೊಕದ್ದಮೆಯನ್ನು ಕೇಜ್ರಿವಾಲ್ ರದ್ದುಪಡಿಸಬೇಕೆಂದು ವಿನಂತಿಸಿಕೊಂಡಿದ್ದರು. ಜೇಟ್ಲಿ 2014ರ ಚುನಾವಣೆಂಲ್ಲಿ ಸುಮಾರು ಒಂದು ಲಕ್ಷ ಮತಗಳಿಂದ ಪರಾಭವಗೊಂಡಿದ್ದರು. ಆದ್ದರಿಂದ ಅವರಿಗೆ ಯಾವುದೇ ಮರ್ಯಾದೆ(ಇಝ್ಝತ್)ಇಲ್ಲ ಎಂದು ಕೇಜ್ರಿವಾಲ್ ಇದಕ್ಕಿಂತ ಮೊದಲು ಗುಡುಗಿದ್ದರು. ಈ ಪ್ರಕರಣದ ವಿಚಾರಣೆ ಮುಂದಿನ ಮಾರ್ಚ್ ಹದಿನೈದಕ್ಕೆ ಮುಂದುವರಿಯಲಿದೆ.