ಹೆಚ್ಚು ಇಂಟಲಿಜೆಂಟ್ ಮಾಡಲು ಹೋಗಿ ವಿದ್ಯಾರ್ಥಿಯ ಸಾವು; ಮ್ಯಾಜಿಸ್ಟ್ರೇಟ್ ವರದಿ
ದಿಲ್ಲಿ ಇಂಟರ್‌ನೇಶನಲ್ ಸ್ಕೂಲ್‌ನ ಒಂದನೆ ತರಗತಿ ವಿದ್ಯಾರ್ಥಿಯ ಅಸಹಜ ಸಾವಿನ ಬಗ್ಗೆ ಮ್ಯಾಜಿಸ್ಟ್ರೇಟ್ ವರದಿ
ಹೊಸದಿಲ್ಲಿ: ತಮ್ಮ ಮಕ್ಕಳು ಹೆಚ್ಚು ಬುದ್ಧಿವಂತರು ಪ್ರತಿಭಾವಂತರಾಗಿರಬೇಕೆಂದು ಇಂದಿನ ಶಾಲೆಗಳು ಬಯಸುತ್ತಿವೆ. ಆದರೆ ಅದು ಪುಟ್ಟ ಮಕ್ಕಳ ಜೀವಕ್ಕೆ ಎರವಾಗುತ್ತಿದೆ ಎಂಬುದನ್ನು ಅವರು ಯೋಚಿಸುವುದಿಲ್ಲ. ದಿಲ್ಲಿ ಸರಕಾರ ನೇಮಿಸಿದ್ದ ಮೆಜಿಸ್ಟ್ರೇಟ್ ತನಿಖೆಯಲ್ಲಿ ದಿವ್ಯಾಂಶ್ ಕಕರೋಡಾ ಎಂಬ ಆರುವರ್ಷದ ಮಗು ಇಂತಹದೊಂದು ದುರ್ಯೋಜನೆ ಬಲಿಯಾಗಿದ್ದ ಎಂದು ಈಗ ಬಹಿರಂಗವಾಗಿದೆ. ಯಾರ್ನ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಅಧಿಕಾರಿಗಳು ಉದ್ದೇಶಪೂರ್ವಕ ನಿಷ್ಕ್ರಿಯತೆ ತೋರಿಸಿದ ಪರಿಣಾಮ ಮಗು ಸಾವಿಗೀಡಾಯಿತು. ನೀರಿನ ಟ್ಯಾಂಕಿಗೆ ಬಿದ್ದ ಮಗುವನ್ನು ಉಳಿಸಿಕೊಳ್ಳಲು ಇವರಾರು ಮುಂದೆ ಬರಲಿಲ್ಲ. ಇದು ಗಂಭೀರ ಅಪರಾಧವೆನಿಸುವ ನಿರ್ಲಕ್ಷ್ಯವಾಗಿದೆ ಎಂದು ಮ್ಯಾಜಿಸ್ಟ್ರೇಟಲ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ದಕ್ಷಿಣ ದಿಲ್ಲಿಯ ವಸಂತ್‌ಕುಂಜ್‌ನ ಸ್ಕೂಲ್ ಅಧ್ಯಾಪಕ ಹಾಗೂ ಇತರ ನಾಲ್ವರು ನೌಕರರನ್ನು ಈ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಅದಕ್ಕಿಂತ ಆರು ದಿನಗಳ ಮೊದಲು ಪ್ರಥಮ ತರಗತಿಯ ವಿದ್ಯಾರ್ಥಿ ದಿವ್ಯಾಂಶ ಪರಿಸರದಲ್ಲಿದ್ದ ನೀರಿನ ಟಾಂಕ್‌ನಲ್ಲಿ ಮೃತನಾಗಿ ಪತ್ತೆಯಾಗಿದ್ದ.
ಸಾರ್ವಜನಿಕರು ತುಂಬ ಮಗುವಿನ ಸಾವಿನಿಂದಾಗಿ ಆಕ್ರೋಶಿತರಾಗಿದ್ದರು. ದಿಲ್ಲಿ ವಸಂತ್ ವಿಹಾರ್‌ನ ಎಸ್‌ಡಿಎಮ್ ಸೋನಲ್ ಸ್ವರೂಪ್‌ರು ತನ್ನ ತನಿಖಾ ವರದಿಯಲ್ಲಿ ಘಟನೆಯಲ್ಲಿ ಶಾಲಾಧಿಕಾರಿಗಳು ಗಂಬೀರ ನಿರ್ಲಕ್ಷ್ಯ ತೋರಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಅವರು ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದು ದಿವ್ಯಾಂಶ್‌ನನ್ನು ವಿಶೇಷ ಮಗು ಎಂದು ತಪ್ಪು ಅಭಿಯಾನ ಕೈಗೊಂಡಿದ್ದರು ಎಂದು ಬೊಟ್ಟು ಮಾಡಿದ್ದಾರೆ. ಶಾಲೆಯು ದಿವ್ಯಾಂಶ್‌ನ ಮೇಲೆ ಅತಿಹೆಚ್ಚು ಸಕ್ರಿಯಗೊಳ್ಳುವಂತೆ ಒತ್ತಡ ಹೇರಿತ್ತು ಎಂದು ತನಿಖೆಯಿಂದ ಗೊತ್ತಾಗಿದೆ. ವರದಿಯಲ್ಲಿ ಶಾಲಾ ಅದಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಲು ವಿಫರಾಗಿದ್ದಾರೆ. ಸ್ವಿಮ್ಮಿಂಗ್ ಕೋಚ್ ಟ್ಯಾಂಕ್‌ನಲ್ಲಿದ್ದ ಮಗುವನ್ನು ರಕ್ಷಿಸಲು ಮುಂದೆ ಬರಲಿಲ್ಲ . ಇತರೆಲ್ಲ ನೌಕರರು ಮೂಕಪ್ರೇಕ್ಷಕರಾಗಿ ನಿಂತರು ಎಂಬುದನ್ನು ಉಲ್ಲೇಖಿಸಲಾಗಿದೆ. ಆದರೆ ಹನ್ನೊಂದನೆ ತರಗತಿಯ ವಿದ್ಯಾರ್ಥಿ ಪ್ರಜ್ವಲ್ ತನ್ನ ಪ್ರಾಣದ ಹಂಗು ತೊರೆದು ನೀರಿನ ಟ್ಯಾಂಕ್‌ಗೆ ಇಳಿದಿದ್ದನು. ಆದರೆ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.