ಕಸ್ಟಮ್ಸ್ ಶುಲ್ಕ ವಿನಾಯತಿ ರದ್ದು; 76 ಜೀವರಕ್ಷಕ ಔಷಧಿಗಳ ಬೆಲೆ ಏರುವ ನಿರೀಕ್ಷೆ !
Update: 2016-02-06 15:16 IST
ಹೊಸದಿಲ್ಲಿ, ಫೆ.6: ಕೇಂದ್ರ ಹಣಕಾಸು ಸಚಿವಾಲಯವು 76 ಜೀವ ರಕ್ಷಕ ಔಷಧಿಗಳ ಆಮದು ಮೇಲಿನ ಕಸ್ಟಮ್ಸ್ ಶುಲ್ಕ ವಿನಾಯತಿಯನ್ನು ಹಿಂಪಡೆದಿದ್ದು, ಇದರಿಂದಾಗಿ ಜೀವರಕ್ಷಕ ಔಷಧಿಗಳ ಬೆಲೆ ಗಗನಕ್ಕೇರುವ ನಿರೀಕ್ಷೆ ಇದೆ.
10 ಎಚ್‌ಐವಿ ಔಷಧಿ, 4 ಕ್ಯಾನ್ಸರ್ ಔಷಧಿಗಳ ಬೆಲೆಯ ಮೇಲೆ ಪರಿಣಾಮ ಬೀರಲಿದೆ. ಹೀಮೊಫಿಲಿಯೊ ರೋಗಿಗಳು ಕೇಂದ್ರ ಸರಕಾರದ ಈ ನಿರ್ಧಾರದಿಂದಾಗಿ ಹೆಚ್ಚು ತೊಂದರೆ ಅನುಭವಿಸಲಿದ್ದಾರೆ.
ಕ್ಯಾನ್ಸರ್ ಮತ್ತು ಜೀವ ರಕ್ಷಕ ಔಷಧಿಯ ಮೇಲೆ ಕೇಂದ್ರ ಸರಕಾರ ಶೇ 22ರಷ್ಟು ಆಮದು ಶುಲ್ಕವನ್ನು ವಿಧಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಕೇಂದ್ರ ಹಣಕಾಸು ಸಚಿವಾಲಯವು ಜನವರಿ 28ರಂದು ಈ ಸಂಬಂಧ ಅಧಿಸೂಚನೆ ಹೊರಡಿಸಿದೆ.