×
Ad

ಕುಡುಕ ವರದಕ್ಷಿಣೆ ಪಿಶಾಚಿ ವರನನ್ನು ಮದುವೆ ಮಂಟಪದಲ್ಲಿಯೇ ತಿರಸ್ಕರಿಸಿ ವಧು!

Update: 2016-02-06 16:05 IST

ಭಿಂಡ್: ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಮೆಹಗಾಂವ್‌ನ ವಧುವೊಬ್ಬಳು ಕುಡುಕ ಮತ್ತು ವರದಕ್ಷಿಣೆ ಆಶೆಬುರುಕ ವರನೊಂದಿಗೆ ಮದುವೆ ಮಾಡಿಕೊಳ್ಳಲು ನಿರಾಕರಿಸಿದ ಘಟನೆ ವರದಿಯಾಗಿದೆ. ಆದಕಾರಣ ವರನ ದಿಬ್ಬಣ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿ ಹೋಗಬೇಕಾಯಿತು. ಮೆಹಗಾಂವ್‌ನ ಮಲ್ಖಾನ್ ರಾಠೋರ್ ಎಂಬವರ ಮಗಳು ಮೀನಾಕ್ಷಿ(20) ಎಂಬಾಕೆಯ ಮದುವೆಯನ್ನು ಅಟೇರ್‌ನ ಪರಾ ಗ್ರಾಮದ ನಿವಾಸಿ ಮನೀಷ್ ಎಂಬಾತನೊಂದಿಗೆ ನಿಶ್ಚಯವಾಗಿತ್ತು. ಗುರುವಾರ ರಾತ್ರಿ ದಿಬ್ಬಣ ಬಂದಾಗ ಮನೆಬಾಗಿಲ್ಲೆ ವರ ಶರಾಬು ಕುಡಿದಿದ್ದನೆಂದು ಗೊತ್ತಾಗಿತ್ತು. ಜೊತೆಗೆ ವರನ ತಂದೆ ಪೂರನ್ ರಾಠೋರ್ ಎರಡು ಲಕ್ಷ ರೂ. ವರದಕ್ಷಿಣೆಯ ಬೇಡಿಕೆ ಇಡತೊಡಗಿದ್ದ.

 ವರದಕ್ಷಿಣೆ ಬೇಡಿಕೆ ವರ-ವಧು ಕುಟುಂಬಗಳಲ್ಲಿ ದೊಡ್ಡ ವಿವಾದದ ಸ್ವರೂಪಕ್ಕೆ ತಲುಪಿತ್ತು. ಮಾತ್ರವಲ್ಲ ಇನ್ನೇನು ಗಲಾಟೆಯೇ ನಡೆಯಲಿದೆ ಎಂದಾದಾಗ ಮಧ್ಯೆಪ್ರವೇಶಿಸಿದ ವಧು ಮೀನಾಕ್ಷಿ ವರ ಮನೀಷ್‌ನನ್ನು ನಾನೊಲ್ಲೇ ಎಂದು ತಿರಸ್ಕಿಸಿಯೇ ಬಿಟ್ಟಳು. ಹತ್ತನೆ ತರಗತಿವರಗೆ ಕಲಿತಿರುವ ಮೀನಾಕ್ಷಿ ವರ ಶರಾಬು ಕುಡಿರುವುದಲ್ಲದೆ ವರದಕ್ಷಿಣೆ ಕೂಡ ಕೊಡಬೇಕೆ ಎಂದು ಪ್ರಶ್ನಿಸಿ ಮದುವೆ ಮಂಟಪದಿಂದಲೇ ಹೊರ ನಡೆದಳು. ತನ್ನ ಕುಟುಂಬದವರ ಬಳಿಗೆ ಬಂದು ತಾನು ಕುಡುಕನನ್ನು, ವರದಕ್ಷಿಣೆ ಆಶೆಬುರುಕನನ್ನು ಮದುವೆಯಾಗುವುದಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದ್ದಾಳೆ. ಆದ್ದರಿಂದ ವರಕಡೆಯವರು ಗತ್ಯಂತರವಿಲ್ಲದೆ ಹುಡುಗಿಯನ್ನು ಅಲ್ಲಿಯೇ ಬಿಟ್ಟು ತಮ್ಮ ದಿಬ್ಬಣವನ್ನು ವಾಪಸು ತೆಗೆದುಕೊಂಡು ಹೋಗಬೇಕಾಯಿತು.ವಧು ಮೀನಾಕ್ಷಿ’ಈಗ ಮದುವೆಯೇ ಆಗಿಲ್ಲ. ಅದಕ್ಕಿಂತ ಮೊದಲೇ ವರದಕ್ಷಿಣೆ ಕೇಳುತ್ತಿದ್ದಾರೆ. ಕುಡುಕ ಬೇರೆ. ಹಾಗಿದ್ದರೆ ಅವನೊಂದಿಗೆ ಜೀವನ ಪೂರ್ತಿ ಹೇಗೆ ಬದುಕುವುದು’ ಎಂದು ಪ್ರಶ್ನಿಸಿದ್ದಾಳೆ. ತನ್ನ ಜೀವನ ನರಕವಾಗುವುದು ಬೇಡ ಎಂಬಕಾರಣಕ್ಕೆ ತನ್ನ ಮದುವೆಯನ್ನು ಅವಳು ತಿರಸ್ಕರಿಸಿದ್ದಾಳೆ. ಮೆಹಗಾಂವ್ ವಿಭಾಗ ಪೊಲೀಸ್ ಅಧಿಕಾರಿ ವಿಮಲ್ ಜೈನ್ ವರ, ವರನ ತಂದೆ ಹಾಗೂ ವರನ ಸಹೋದರನ ವಿರುದ್ಧ ವಧುವಿನ ತಾಯಿ ನೀಡಿದ ದೂರಿನ ಪ್ರಕಾರ ಮೊಕದ್ದಮೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News