×
Ad

ಪಾಟ್ನ: ಎಲ್ ಜೆ ಪಿ ಮುಖಂಡನ ಹತ್ಯೆ

Update: 2016-02-06 16:14 IST

ಪಾಟ್ನ: ಇಲ್ಲಿನ ಫತುಹಾ ಠಾಣೆ ವ್ಯಾಪ್ತಿಯ ಕಚ್ಚಿದರ್ಗಾ ಪೀಪಪುಲ್ ಸಮೀಪ ಅಜ್ಞಾತ ಬಂದೂಕುಧಾರಿಗಳು ನಿನ್ನೆ ಜನಶಕ್ತಿ ಪಾರ್ಟಿಯ(ಎಲ್‌ಜೆಪಿ) ನಾಯಕ ಭೃಜ್‌ನಾಥ್ ಸಿಂಗ್‌ರನ್ನು ಗುಂಡಿಟ್ಟು ಸಾಯಿಸಿದ್ದಾರೆ. ಅವರ ತಮ್ಮನ ಪತ್ನಿ ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ. ವರಿಯದ ಪೊಲೀಸ್ ಅಧಿಕಾರಿ ಮನು ಮಹರಾಜ್‌ರು ಸಿಂಗ್ ತನ್ನ ವಾಹನದಲ್ಲಿ ಎಲ್ಲಿಗೊ ಹೊರಟಿದ್ದಾಗ ಕಚ್ಚಿದರ್ಗಾ ಪೀಪಪುಲ್ ಸಮೀಪ ದುಷ್ಕರ್ಮಿಗಳು ಏಕೆ 47 ಬಂದೂಕಿನಿಂದ ಯದ್ವತದ್ವಾ ಗುಂಡು ಹಾರಿಸಿದರೆಂದು ತಿಳಿಸಿದ್ದಾರೆ.

   ಈ ಘಟನೆಯಲ್ಲಿ ಸಿಂಗ್‌ರು ಸ್ಥಳದಲ್ಲೇ ಮೃತರಾಗಿದ್ದರೆ ಅವರ ತಮ್ಮನ ಗಾಯಾಳು ಪತ್ನಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊದಲು ಸಿಂಗ್‌ರ ಪತ್ನಿಯೇ ಈ ಘಟನೆಯಲ್ಲಿ ಹತ್ಯೆಯಾಗಿದ್ದಾರೆಂಬ ವದಂತಿ ಹರಡಿತ್ತು. ಇದನ್ನು ಪೊಲೀಸರು ನಿರಾಕರಿಸಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬೃಜ್‌ನಾಥ್‌ರ ಮಗ ರಾಕೇಶ್ ರೋಶನ್ ಲಾಲು ಪ್ರಸಾದ್ ಯಾದವ್‌ರ ಮಗ ತೇಜಸ್ವಿ ಯಾದವ್‌ರ ವಿರುದ್ಧ ರಾಘೋಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಇದಕ್ಕಿಂತ ಮೊದಲು ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ವಿರುದ್ಧ ಸ್ವತಃ ಬೃಜ್‌ನಾಥ್ ಸಿಂಗ್ ಸ್ಪರ್ಧಿಸಿದ್ದರು. ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ನಾಲ್ದೆಸೆಗಳಲ್ಲೂ ಪೊಲೀಸರು ಬಲೆ ಬೀಸಿದ್ದಾರೆ. ಬೃಜ್‌ನಾಥ್‌ರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು ಬಹುಶಃ ಇದೊಂದು ಗ್ಯಾಂಗ್ ವಾರ್ ಇರಬಹುದೆಂದು ಪೊಲೀಸ್ ಅಧೀಕ್ಷಕ ಮನು ಮಹಾರಾಜ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News