×
Ad

ನೈಜೀರಿಯದಲ್ಲಿ ಲಾಸ ಜ್ವರ: 101 ಬಲಿ

Update: 2016-02-06 23:29 IST

ಲಾಗೋಸ್ (ನೈಜೀರಿಯ), ಫೆ. 6: ನೈಜೀರಿಯದಲ್ಲಿ ‘ಲಾಸ’ ಜ್ವರ ಕಾಡ್ಗಿಚ್ಚಿನಂತೆ ಹರಡುತ್ತಿದ್ದು 101 ಮಂದಿ ಇದಕ್ಕೆ ಈಗಾಗಲೇ ಬಲಿಯಾಗಿದ್ದಾರೆ ಎಂದು ದೇಶದ ಆರೋಗ್ಯ ಅಧಿಕಾರಿಗಳು ಶನಿವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.
ಕಳೆದ ವರ್ಷದ ಆಗಸ್ಟ್ ಬಳಿಕ ಮೆದುಳಿನ ರಕ್ತಸ್ರಾವಕ್ಕೆ ಕಾರಣವಾಗುವ ಜ್ವರದ 175 ಪ್ರಕರಣಗಳು ವರದಿಯಾಗಿದ್ದು, 101 ಮಂದಿ ಮೃತಪಟ್ಟಿದ್ದಾರೆ ಎಂದು ನೈಜೀರಿಯದ ರೋಗ ನಿಯಂತ್ರಣ ಕೇಂದ್ರದ ಅಂಕಿಅಂಶಗಳು ಹೇಳಿವೆ.
ಅಬುಜ, ಲಾಗೋಸ್ ಮತ್ತು ಇತರ 14 ರಾಜ್ಯಗಳಲ್ಲಿ ಜ್ವರದಿಂದ ಸಾವುಗಳು ಸಂಭವಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News