×
Ad

ವಿಶ್ವಭಾರತಿ ಉಪಕುಲಪತಿಯ ವಜಾ ಸಮರ್ಥಿಸಿದ ಕಾನೂನು ಸಚಿವಾಲಯ

Update: 2016-02-06 23:32 IST

ಹೊಸದಿಲ್ಲಿ, ಫೆ.6: ವಿಶ್ವ ಭಾರತಿಯ ಉಪಕುಲಪತಿ ಸುಶಾಂತ ದತ್ತಗುಪ್ತರ ವಜಾಕ್ಕೆ ಮಾನವ ಸಂಪನ್ಮೂಲ ಸಚಿವಾಲಯದ ಶಿಫಾರಸು ಪ್ರಸ್ತಾವ ಹಾಗೂ ಅನುಸರಿಸಲಾಗಿರುವ ಪ್ರಕ್ರಿಯೆ ‘ಕಾನೂನು ಪ್ರಕಾರ ಸಮರ್ಥನೀಯ’ ಎಂದು ಕಾನೂನು ಸಚಿವಾಲಯ ಅಭಿಪ್ರಾಯಿಸಿದೆ.

 ಕಾನೂನು ಸಚಿವಾಲಯದ ಈ ಅಭಿಪ್ರಾಯವು ಕೇಂದ್ರೀಯ ವಿದ್ಯಾ ಸಂಸ್ಥೆಗಳ ಸಂದರ್ಶಕರಾಗಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಗೆ, ಆರ್ಥಿಕ ಹಾಗೂ ಆಡಳಿತಾತ್ಮಕ ಅವ್ಯವಹಾರದ ಆರೋಪ ಎದುರಿಸುತ್ತಿರುವ ಉಪಕುಲಪತಿಯ ವಜಾಕ್ಕೆ ಮತ್ತೆ ಶಿಫಾರಸು ಮಾಡಲು ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯಕ್ಕೆ ಹಾದಿ ಸುಗಮಗೊಳಿಸಿದೆ. ಈ ಪ್ರಸ್ತಾಪ ಕಾನೂನು ಪ್ರಕಾರ ಸರಿಯೆಂಬ ಅಭಿಪ್ರಾಯವನ್ನು ಕಾನೂನು ಸಚಿವಾಲಯವು ಎಚ್‌ಆರ್‌ಡಿ ಸಚಿವಾಲಯಕ್ಕೆ ತಿಳಿಸಿತ್ತು. ಎಚ್‌ಆರ್‌ಡಿ ಸಚಿವಾಲಯವು ಈ ಸಂಬಂಧ ಅಟಾರ್ನಿ ಜನರಲ್‌ರ ಅಭಿಪ್ರಾಯವನ್ನೂ ಕೇಳಬಹುದೆಂದು ಕಾನೂನು ಸಚಿವಾಲಯವು ಸಲಹೆ ನೀಡಿತ್ತೆಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News