×
Ad

ಶೀಘ್ರವೇ ಅಪರಾಧಿಗಳ ಬೆರಳಚ್ಚಿನ ಆನ್‌ಲೈನ್ ಮಾಹಿತಿ ಕೋಶ

Update: 2016-02-06 23:38 IST

ಭೋಪಾಲ, ಫೆ.6: ಮುಂದಿನ 2017ರೊಳಗೆ ಪ್ರತಿ ರಾಜ್ಯದ ಅಪರಾಧಿಗಳು ಹಾಗೂ ಶಿಕ್ಷೆಗೊಳಗಾದವರ ಬೆರಳಚ್ಚುಗಳ ಸಮಗ್ರ ಆನ್‌ಲೈನ್ ಡಾಟಾಬೇಸ್ ಒಂದನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಹೊಂದಿದೆ. ಇದು ದೇಶದ್ಯಾಂತ ತನಿಖೆ ಹಾಗೂ ಕಾನೂನು ಪ್ರಕ್ರಿಯೆ ಸುಧಾರಣೆಗೆ ಈ ಯೋಜನೆ ನೆರವಾಗಲಿದೆ.
ಅಂತಾರಾಜ್ಯ ಅಪರಾಧಗಳ ತನಿಖೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಖಚಿತವಾಗಿ ನಡೆಸಲು ಈ ಮಾಹಿತಿ ಕೋಶ ನೆರವಾಗಲಿದೆಯೆಂದು ಎನ್‌ಸಿಆರ್‌ಬಿಯ ಮಹಾ ನಿರೀಕ್ಷಕ ರಾಜಾ ಶ್ರೀವಾಸ್ತವ ಹಾಗೂ ಉಪ ಮಹಾನಿರೀಕ್ಷಕ ಐಡಿ.ಶುಕ್ಲಾ ವಿವರಿಸಿದ್ದಾರೆ.
 ಕಳೆದ 100 ವರ್ಷಗಳಿಂದ ವಿಶ್ವಾದ್ಯಾಂತ ತನಿಖೆಗಳಲ್ಲಿ ಅಪರಾಧ ನಡೆದ ಸ್ಥಳದಿಂದ ಸಂಗ್ರಹಿಸಲಾಗುವ ಬೆರಳಚ್ಚು ತನಿಖೆಯ ಸಮಗ್ರ ಹಾಗೂ ಪರಿಣಾಮಕಾರಿ ಭಾಗವಾಗಿದೆ. ಭಾರತದಲ್ಲಿ ಬೆರಳಚ್ಚು ದಾಖಲೆಗಳನ್ನು ಒಂದೇ ಮಾಹಿತಿಕೋಶದಲ್ಲಿ ರಕ್ಷಿಸಿಡದ ಕಾರಣ, ಅಪರಾಧಿಗಳ ಬೆರಳಚ್ಚು ದಾಖಲೆಗಳು ಪೊಲೀಸ್ ಠಾಣೆಗಳ ಕಡತಗಳ ರಾಶಿಯಲ್ಲಿ ಕಳೆದು ಹೋಗುತ್ತವೆ ಅಥವಾ ಅಡಗಿರುತ್ತವೆ. ಇದರಿಂದ ತನಿಖೆದಾರರಿಗೆ ಈ ಕೆಲಸ ಸವಾಲಿನದಾಗುತ್ತದೆ.
ಇತ್ತೀಚೆಗೆ, ಭೋಪಾಲದಲ್ಲಿ ನಡೆದ ಬೆರಳಚ್ಚು ಬ್ಯೂರೊಗಳ ಅಧಿಕಾರಿಗಳ ವಾರ್ಷಿಕ ರಾಷ್ಟ್ರೀಯ ಸಮ್ಮೇಳನದಲ್ಲಿ ಡಾಟಾಬೇಸ್ ಅಭಿವೃದ್ಧಿಪಡಿಸುವ ನೀಲ ನಕಾಶೆಯ ಬಗ್ಗೆ ಚರ್ಚಿಸಲಾಗಿದೆ.
ಈ ಮಾಹಿತಿಯನ್ನು 2008ರ ಮುಂಬೈ ಭಯೋತ್ಪಾದಕ ದಾಳಿಯ ಬಳಿಕ ಅಭಿವೃದ್ಧಿಪಡಸಲಾಗಿರುವ ರಾಷ್ಟ್ರಾದ್ಯಂತದ ಆನ್‌ಲೈನ್ ಜಾಲದಲ್ಲಿ ಅಳವಡಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News