×
Ad

ವಿದೇಶಾಂಗ ಇಲಾಖೆಯ ವಕ್ತಾರ ಸ್ಫೋಟಕಗಳ ಅಣುಗಳನ್ನು ಗುರುತಿಸುವ ಪದಾರ್ಥ ಸೃಷ್ಟಿ

Update: 2016-02-06 23:42 IST

ಲಂಡನ್, ಫೆ. 6: ಸ್ಫೋಟಕಗಳ ಅಣುಗಳನ್ನು ಗುರುತಿಸಿದಾಗ ಮಿನುಗುವ ನೂತನ ಪದಾರ್ಥವೊಂದನ್ನು ವಿಜ್ಞಾನಿಗಳು ಸೃಷ್ಟಿಸಿದ್ದಾರೆ. ಈ ಸಂಶೋಧನೆ ಬಾಂಬ್‌ಗಳನ್ನು ಗುರುತಿಸಿ ಭದ್ರತೆಯನ್ನು ಹೆಚ್ಚಿಸಲು ಸರಕಾರಗಳಿಗೆ ನೆರವಾಗಲಿದೆ ಎಂದು ಭಾವಿಸಲಾಗಿದೆ.
ನೂತನ ಪದಾರ್ಥವು ಟಿಟಿಎಫ್-ಸಿ(4)ಪಿ ಮತ್ತು ಟಿಎನ್‌ಡಿಸಿಎಫ್ ಎಂಬ ಅಣುಗಳನ್ನು ಹೊಂದಿರುತ್ತದೆ. ಈ ಅಣುಗಳು ತಮ್ಮ ಪ್ರದೇಶದಲ್ಲಿರುವ ಸ್ಫೋಟಕಗಳ ಸಂಪರ್ಕಕ್ಕೆ ಬಂದಾಗ ಪ್ರತಿಕ್ರಿಯಿಸುತ್ತವೆ.
ಸ್ಫೋಟಕದ ಅಣುವೊಂದು ಟಿಎನ್‌ಡಿಸಿಎಫ್ ಅಣುಗಳ ಗಮನಕ್ಕೆ ಬಂದಾಗ ಅದು ಬೆಳಗುತ್ತದೆ.

ಈ ನೂತನ ಜ್ಞಾನವನ್ನು ಬಳಸಿ ಸಣ್ಣ ಉಪಕರಣವೊಂದನ್ನು ನಿರ್ಮಿಸಬಹುದಾಗಿದೆ. ಈ ಉಪಕರಣಗಳನ್ನು ಬಳಸಿ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ಸು ನಿಲ್ದಾಣ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಚೀಲಗಳಲ್ಲಿ ಮತ್ತು ಚೀಲಗಳ ಸಮೀಪ ಸ್ಫೋಟಕ ಅಣುಗಳಿವೆಯೇ ಎಂಬುದನ್ನು ಪತ್ತೆಹಚ್ಚಬಹುದಾಗಿದೆ.
-ಸ್ಟೀಫನ್ ಬಾಹ್ರಿಂಗ್, ಸಂಶೋಧನೆಯ ಪ್ರಥಮ ಲೇಖಕ, ದಕ್ಷಿಣ ಡೆನ್ಮಾರ್ಕ್ ವಿಶ್ವವಿದ್ಯಾನಿಲಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News