×
Ad

ಈ ಮಹಿಳೆಯ ಕೂದಲಿನ ಉದ್ದ 55 ಅಡಿ !

Update: 2016-02-07 16:10 IST

ಹೊಸದಿಲ್ಲಿ: ಉದ್ದ ಕೂದಲಿರುವುದು ಸಾಮಾನ್ಯರಿಗೂ ಇಷ್ಟವಾಗುವ ವಿಚಾರವಾಗಿದೆ. ಹುಡುಗಿಯರಂತೂ ಉದ್ದ ಕೂದಲನ್ನು ಬಹಳ ಇಷ್ಟಪಡುತ್ತಾರೆ. ಅಂತಹ ಕೂದಲಿರುವವರನ್ನು ಕಂಡರೆ ನಮಗೂ ಇಂತಹ ಕೂದಲಿರುತ್ತಿದ್ದರೆ ಎಂದೂ ಹಾತೊರೆಯುವರೂ ಇದ್ದಾರೆ. ಆಶಾಮೆಂಡಲ್‌ರ ಉದ್ದ ಕೂದಲಿನ ಬಗ್ಗೆ ತಿಳಿದುಕೊಂಡರೆ ನೀವು ಹೌಹಾರುತ್ತೀರಿ!

 ಯಾಕೆಂದರೆ ಬರೋಬ್ಬರಿ 55ಫೀಟ್ ಉದ್ದದ ಕೂದಲನ್ನು ಅವರು ಹೊಂದಿದ್ದಾರೆ ಆಶಾ ಮೆಂಡಲ್ . 2008ರಲ್ಲಿ ದೊಡ್ಡ ಕೂದಲಿಗಾಗಿ ದಾಖಲೆ ಮಾಡಿದ್ದರು.  ಕ್ಯಾನ್ಸರ್ ಡಿಕ್ಟೇಟ್ ಆದ ಮೇಲೆ ಈ ರೀತಿ ಕೂದಲು ಬೆಳೆಸತೊಡಗಿ ಅದ್ಭುತ ಸೃಷ್ಟಿಸಿದ್ದಾರೆ. ಇಪ್ಪತ್ತೈದು ವರ್ಷಗಳಿಂದ ಕೂದಲು ಬೆಳೆಸುತ್ತಿದ್ದಾರೆ.  ಅದೂ ಕೀಮೊಥೆರಪಿ ಟ್ರೀಟ್‌ಮೆಂಟ್ ಮಾಡಿಸಿಕೊಳ್ಳುತ್ತಾ ಮೆಂಡಲ್ ತನ್ನ ಕೂದಲನ್ನು ಇಷ್ಟು ಉದ್ದ ಬೆಳೆಸಿದ್ದಾರೆನ್ನುವುದು ಸಣ್ಣ ಮಾತಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News