×
Ad

ಜಾಗತಿಕ ವಿರೋಧ ಲೆಕ್ಕಿಸದೆ ರಾಕೆಟ್ ಪರೀಕ್ಷಿಸಿದ ಉತ್ತರಕೊರಿಯಾ

Update: 2016-02-07 16:36 IST

     ಸೋಲ್: ಉತ್ತರ ಕೊರಿಯ ಅಂತಾ ರಾಷ್ಟ್ರ ವಿರೋಧವನ್ನು ಲೆಕ್ಕಕ್ಕಿಡದೆ ನಿನ್ನೆ ಮಧ್ಯ ರಾತ್ರಿಯಲ್ಲಿ ರಾಕೆಟ್ ಹಾರಿಸಿದೆ. ಈತಿಂಗಳು ಹದಿನಾರನೆ ತಾರೀಕಿಗೆ ತಾನು ಉಪಗ್ರಹಕ್ಕೆ ರಾಕೆಟ್‌ನ್ನು ಜೋಡಿಸುವೆ ಎಂದು ಉತ್ತರಕೊರಿಯ ಹೇಳಿಕೊಂಡಿತ್ತು.

ಆದರೆ ಸರ್ವಾಧಿಕಾರಿ ಕಿಂ ಜಂಗ್ ಉನ್‌ರ ತಂದೆ ಮಾಜಿ ಆಡಳಿತಗಾರ ಕಿಂ ಜಂಗ್ ಇಲ್‌ರ ಜನ್ಮದಿನವಾದ್ದರಿಂದ ಅದಕ್ಕಿಂತ ಮೊದಲೆ ಈ ಕೆಲಸವನ್ನು ಮಾಡಿ ಮುಗಿಸಿದೆ ಎಂದು ಉತ್ತರ ಕೊರಿಯ ತಿಳಿಸಿದೆ.

ರಾಕೆಟ್‌ನ್ನು ಉಪಗ್ರಹಕ್ಕೆ ಕಳಿಸಿದ ಬಳಿಕ ಬಾಲಿಸ್ಟಿಕ್ ಕ್ಷಿಪಣಿ ನಿರ್ಮಿಸುವ ಉದ್ದೇಶವನ್ನು ಉತ್ತರ ಕೊರಿಯಾ ಹೊಂದಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಈ ಮುಂಚೆ ಅದು ಬಾಲಿಸ್ಟಿಕ್ ಮಿಸೈಲ್‌ಗಳ ಎರಡು ಪ್ರತಿಗಳನ್ನು ವಿಶ್ವ ಸಮುದಾಯದ ಮುಂದೆ ಪ್ರದರ್ಶಿಸಿತ್ತು. ಅಮೆರಿಕವನ್ನು ಧ್ವಂಸಗೊಳಿಸುವಷ್ಟು ಇವು ಬಲಶಾಲಿಯೆಂದು ಅದು ಹೇಳಿಕೊಂಡಿತ್ತು. ಇದಕ್ಕಿಂತೆ ಮುಂಚೆ ದೀರ್ಘದೂರ ರಾಕೆಟ್‌ನ್ನು ಹಾರಿಸಿತ್ತು.

                                                                                               

ಭೂಮಿಯ ನಿರೀಕ್ಷಣಾ ಉಪಗ್ರಹ ಹಾರಿಸುವ ಉದ್ದೇಶದಿಂದ ಮಿಸೈಲ್‌ನ್ನು ಪರೀಕ್ಷಿಸಲಾಗಿದೆ. ಭೂಮಿಯ ನಿರೀಕ್ಷೆಣೆಗಾಗಿ ಕಾಂಗ್ಯೂಂಗ್ ಸೋಂಗ್ ಎಂಬ ಉಪಗ್ರಹವನ್ನು ಫೆಬ್ರವರಿ 25ಕ್ಕೆ ಹಾರಿಸಲಾಗುವುದು ಎಂದು ಈ ಮುಂಚೆಯೇ ಅದು ತಿಳಿಸಿತ್ತು. ಪ್ರಾದೇಶಿಕ ಸಮಯ ಬೆಳಗ್ಗೆ ಒಂಬತ್ತಕ್ಕೆ ರಾಕೆಟ್‌ನ್ನು ಹಾರಿಸಲಾಗಿದ್ದು ಇದು ಉಪಗ್ರಹಹಾರಿಸಲಿಕ್ಕಾಗಿ ನಡೆಸಲಾದ ಪೂರ್ವಭಾವಿ ಪ್ರಯೋಗ ವಾಗಿದ್ದು ಅದು ಯಶಸ್ವಿಯಾಗಿದೆ ಎಂದು ಸ್ವತಃ ಉ.ಕೊರಿಯಾ ಹೇಳಿಕೊಂಡಿದೆ.

ಆದರೆ ಇದು ದೀರ್ಘದೂರ ರಾಕೆಟ್ ಹಾರಿಸಲಿಕ್ಕಾಗಿ ನಡೆಸಲಾದ ಪ್ರಯೋಗ ಎಂದು ಜಾಗತಿಕ ರಾಷ್ಟ್ರಗಳು ಅಭಿಪ್ರಾಯಿಸಿವೆ. ಉತ್ತರ ಕೊರಿಯದ ಉಪಗ್ರಹ ಹಾರಿಸುವ ಸ್ಥಳದಲ್ಲಿ ಇಂಧನ ತುಂಬಿದವಾಹನಗಳನ್ನು ಸಾಟಲೈಟ್ ಚಿತ್ರಗಳು ತೋರಿಸಿವೆ ಎಂದು ಅಮೆರಿಕ ಹೇಳಿದೆ. ಈ ಮೊದಲು ರಾಕೆಟ್ ಹಾರಿಸಲು ಅನುಮತಿ ಕೋರಿ ಉ.ಕೊರಿಯಾ ವಿಶ್ವಸಂಸ್ಥೆಗೆ ಮನವಿ ಮಾಡಿತ್ತು. ಆದರೆ ವಿಶ್ವಸಂಸ್ಥೆ ಭದ್ರತಾ ಸಮಿತಿಇದನ್ನು ಅಂಗೀಕರಿಸಿರಲಿಲ್ಲ.ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸೂಚನೆಗಳನ್ನು ಉ.ಕೊರಿಯ ಉಲ್ಲಂಘಿಸಿದೆ ಎಂದು ಜಪಾನ್ ಪ್ರಧಾನಮಂತ್ರಿ ಶಿನ್‌ಸೋ ಅಬೆ ಪ್ರತಿಕ್ರಿಯಿಸಿದ್ದಾರೆ. ಕಳೆದ ತಿಂಗಳು ಆರನೆ ತಾರೀಕಿಗೆ ಉತ್ತರಕೊರಿಯಾ ಅಣ್ಚಸ್ತ್ರ ಪರೀಕ್ಷೆ ನಡೆಸಿತ್ತು.

ಆಗಲೂ ಅದು ವಿಶ್ವಸಂಸ್ಥೆಯ ವಿರೋಧವನ್ನು ಲೆಕ್ಕಿಸಿರಲಿಲ್ಲ. ಮಿಸೈಲ್ ಹಾರಿಸಿರುವುದಕ್ಕೆ ಬೆಲೆತೆರಬೇಕಾದೀತೆಂದು ಅಮೆರಿಕಾ ಪ್ರತಿಕ್ರಿಯಿಸಿದೆ. ಉಪಗ್ರಹ ಹಾರಿಸುವುದನ್ನು ಟೀಕಿಸಿದ ಜಪಾನ್ ಹಾಗೂ ದಕ್ಷಿಣಕೊರಿಯಾ ಕೂಡಲೇ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆ ಸೇರಬೇಕೆಂದು ವಿನಂತಿಸುತ್ತಿದೆ. ಈ ಮೊದಲು ಉತ್ತರಕೊರಿಯಾ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದು ಜಾಗತಿಕ ರಾಷ್ಟ್ರಳನ್ನು ದಿಕ್ಕೆಡಿಸಿತ್ತು. ಆನಂತರ ತಾನು ಹೈಡ್ರೋಜನ್ ಬಾಂಬ್‌ನ್ನು ಕೂಡ ಪರೀಕ್ಷಿಸಿದ್ದೇನೆಂದು ಉತ್ತರಕೊರಿಯಾ ಹೇಳಿತ್ತು.

2006,2009,2013 ವರ್ಷಗಳಲ್ಲಿಯೂ ಅದು ಅಣ್ವಸ್ತ್ರ ಪರೀಕ್ಷೆ ನಡೆಸಿತ್ತು. ಈಗ ಜಗತ್ತಿನ ವಿರೋಧಗಳನ್ನು ಎದುರಿಸಿ ಉ.ಕೊರಿಯ ಒಂಟಿಯಾಗಿ ಉಳಿದಿದೆ. ಇದೀಗ ಅದು ನಡೆಸಿರು ಹೊಸ ಮಿಸೈಲ್ ಪರೀಕ್ಷೆ ಅಮೆರಿಕ ಸಹಿತ ಜಾಗತಿಕ ರಾಷ್ಟ್ರಗಳ ನಿದ್ದೆಗೆಡಿಸಿದೆ. ದಕ್ಷಿಣಕೊರಿಯಕ್ಕೆ ಇದು ಬಹುದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News