×
Ad

ಚೆನ್ನೈಯಲ್ಲಿ ಪತ್ತೆಯಾದ ಅನಾಥ ಶವ ತಮಿಳು ಸಿನೆಮಾ ನಟಿ ಶಶಿರೇಖಾರದ್ದು

Update: 2016-02-07 17:12 IST

ಕೊಲೆಗೈದ ಗಂಡ ಮತ್ತು ಆತನ ಪ್ರೇಯಸಿಯ ಬಂಧನ

ಚೆನ್ನೈ: ಒಂದು ತಿಂಗಳ ಹಿಂದೆ ಕಸದ ರಾಶಿಯಲ್ಲಿ ಪತ್ತೆಯಾಗಿದ್ದ ಮೃತದೇಹ ಸಿನೆಮಾ ನಟಿಯದ್ದಾಗಿದೆ ಎಂದು ಬಹಿರಂಗಗೊಂಡಿದೆ. ದಕ್ಷಿಣಭಾರತದ ನಟಿಶಶಿರೇಖಾ(32) ಕೊಲೆಗೀಡಾದ ಮಹಿಳೆಯಾಗಿದ್ದಾರೆ. ಶಶಿರೇಖಾ ಎರಡನೆ ಪತಿ ಮತ್ತು ಅವನ ಪ್ರೇಯಸಿಯನ್ನು ಪೊಲೀಸರು ಬಂಧಿಸಿದ್ದಾರೆ. ಜನವರಿ ಐದಕ್ಕೆ ಚೆನ್ನೈ ರಾಮಪುರದ ಕಸದರಾಶಿಯಲಿ ತಲೆಯಿಲ್ಲದ ದೇಹ ಪತ್ತೆಯಾಗಿತ್ತು. ನಂತರ ಕೊಲಪ್ಪದ ಒಂದು ಕಾಲುವೆಯಲ್ಲಿ ತಲೆಯನ್ನು ಪತ್ತೆ ಹಚ್ಚಲಾಗಿತ್ತು. ಶಶಿರೇಖಾರ ಪತಿ ರಮೇಶ್ ಶಂಕರ್ ಮತ್ತು ಸಿನೆಮಾ ನಟಿ ಹಾಗೂ ಆತನ ಪ್ರೇಯಸಿಯಾದ ಲೋಕ್ಯಕಶ್ಯಳನ್ನು ಪೊಲೀಸರು ಬಂಧಿಸಿದ್ದಾರೆ..

    

       ಚೆನ್ನೈ ಸಮೀಪ ರಾಮಪುರದಲ್ಲಿ ಜನವರಿ ಐದಕ್ಕೆ ತಲೆಯಿಲ್ಲದ ದೇಹವೊಂದು ಪತ್ತೆಯಾಗಿತ್ತು. ರಮೇಶ್ ಮತ್ತು ಪ್ರೇಯಸಿ ಸೇರಿ ಕೊಲೆಪಾತಕ ಎಸಗಿದ್ದಾರೆ ಎಂದು ಅವರ ಬಂಧನದ ನಂತರ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ. ಕೊಲೆಗೀಡಾದ ಶಶಿರೇಖಾವಿವಾಹವಿಚ್ಛೇದಿತೆ ಮತ್ತು ಒಂದು ಮಗುವಿನ ತಾಯಿಯಾಗಿದ್ದು ಕಳೆದ ವರ್ಷ ಆಗಸ್ಟ್‌ನಲ್ಲಿ ರಮೇಶ್ ಅವರನ್ನು ವಿವಾಹವಾಗಿದ್ದ. ಆದರೆ ಲೋಕ್ಯಳೊಂದಿಗೆ ಅವನ ಪ್ರಣಯ ಮುಂದುವರಿದಿತ್ತು. ಶಶಿರೇಖಾ ರಮೇಶ್‌ನನ್ನು ಇದಕ್ಕಾಗಿ ಪ್ರಶ್ನಿಸಿ ಜಗಳ ತೆಗೆದಿದ್ದರು. ಅವರು ಮಗುವನ್ನು ಅಪಹರಿಸಿದ್ದಾನೆ ಮತ್ತು ದೈಹಿಕ ಹಿಂಸೆ ನೀಡಿದ್ದಾನೆ ಎಂದು ಪತಿ ರಮೇಶ್‌ನ ವಿರುದ್ಧ ದೂರು ನೀಡಿದ್ದರು. . ಇನ್ನಷ್ಟೇ ಬಿಡುಗಡೆಗೊಳ್ಳಲಿರುವ ಚಿತ್ರವೊಂದರಲ್ಲಿ ಶಶಿರೇಖಾ ಪ್ರಧಾನ ಪಾತ್ರದಲ್ಲಿದ್ದಾರೆ. ಶಶಿರೇಖಾ ಮನೆಯವರು ಅವರನ್ನು ಕಾಣೆಯಾಗಿದ್ದಾರೆಂದು ದೂರು ನೀಡಿದಾಗ ಪೊಲೀಸ್ ತನಿಖೆ ರಮೇಶ್‌ನೆಡೆಗೆ ಸಾಗಿತ್ತು. ಈಸಂದರ್ಭದಲ್ಲಿ ರಮೇಶ ಕದ್ದು ಮುಚ್ಚಿ ನಡೆದಾಡುತ್ತಿದ್ದುದು ಪೊಲೀಸರಿಗೆ ಸಂಶಯ ಬಲವಾಗಲು ಕಾರಣವಾಗಿತ್ತು.

ಆತನ ಮೊಬೈಲ್ ನಂಬರ್‌ನ್ನು ಟ್ಯಾಪ್ ಮಾಡಿ ಅವನು ಅಡಗಿದ್ದ ಸ್ಥಳವನ್ನು ಪೊಲೀಸರು ಪತ್ತೆಹಚ್ಚಿದರು. ರಮೇಶ್ ಮತ್ತು ಲೋಕಕಶ್ಯ ವಲಸರವಕ್ಕ ಎಂಬಲ್ಲಿ ಮನೆಯೊಂದರಿಂದ ಪೊಲೀಸರು ಬಂಧಿಸಿದ್ದಾರೆ. ತಾನೂ ರಮೇಶ್ ಸೇರಿ ಶಶಿರೇಖಾರನ್ನು ಕೊಂದಿದ್ದೇವೆಂದು ಲೋಕಕಶ್ಯ ಪೊಲೀಸರಿಗೆ ತಿಳಿಸಿದ್ದಾಳೆ. ತಲೆಗೆ ಹೊಡೆದೆವು ಶಶಿರೇಖಾ ಸತ್ತ ನಂತರ ತಲೆಕತ್ತರಿಸಿ ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಪ್ಲಾಸ್ಟಿಕ್‌ಚೀಲಕ್ಕೆ ತುಂಬಿಸಿ ರಾಮಪುರದ ಕಸದ ರಾಶಿಯಲ್ಲಿ ಮೃತ ಶರೀರವನ್ನು ಮತ್ತು ತಲೆಯನ್ನು ಕೊಲಪಾಕದ ಕಾಲುವೆಗೂ ಎಸೆದಿದ್ದೇವೆ ಎಂದು ಆಕೆ ಬಾಯಿಬಿಟ್ಟಿದ್ದಾಳೆ.

   

 ರಮೇಶ್ ಶಂಕರ್ ಸಿನೆಮಾದೊಂದಿಗೆ ಸಂಬಂಧ ಇರು ವ್ಯಕ್ತಿಯಾಗಿದ್ದಾನೆ. ಸಿನೆಮಾ ವ್ಯಾಮೋಹವಿರುವ ಹೆಮ್ಮಕ್ಕಳಿಗೆ ಪಾತ್ರ ತೆಗೆಸಿಕೊಡುವ ಏಜನ್ಸಿ ನಡೆಸುತ್ತಿದ್ದ. ಈ ಮೊದಲು ಇವನ ಮೊದಲ ಹೆಂಡತಿ ಹಾಗೂ ತಂದೆ ತಾಯಿಗಳು ಆತ್ಮಹತ್ಯೆ ನಡೆಸಿದ್ದರು. ಬಿಸಿನೆಸ್ ನಷ್ಟದಿಂದ ಅವರು ಆತ್ಮಹತ್ಯೆ ನಡೆಸಿದ್ದರು ಎನ್ನಲಾಗಿದೆ. ಈ ಕುಟುಂಬ ಆರ್ಥಿಕ ಮುಗ್ಗಟ್ಟು ಅನುಭವಿಸಲಿಕ್ಕೂ ರಮೇಶನೇ ಕಾರಣನಾಗಿದ್ದ. ಬಳಿಕ ಸಿನೆಮಾಕ್ಷೇತ್ರಕ್ಕೆ ನಿಕಟನಾಗಿದ್ದ. ನಾಯಕಿಯರ ರಿಕ್ರೂಟಿಂಗ್ ಎಜೆನ್ಸಿ ನಡೆಸುತ್ತಿದ್ದ ಆತನಿಗೆ ಲೋಕ್ಯಳೊಂದಿಗೆ ಸಂಪರ್ಕವೇರ್ಪಟ್ಟಿತ್ತು. ಲೋಕ್ಯ ಕೇರಳದವಳಾಗಿದ್ದು ಮದುವೆಯಾಗದಂತೆ ತಪ್ಪಿಸಿಕೊಳ್ಳಲಿಕ್ಕಾಗಿ ಚೆನ್ನೈಗೆ ಬಂದಿದ್ದಳು. ಸಿನೆಮಾದಲ್ಲಿ ನಟಿಸುವುದು ಅವಳ ಮಹತ್ವಾಕಾಂಕ್ಷೆಯಾಗಿತ್ತು. ಈ ನಡುವೆ ರಮೇಶ್ ಪರಿಚಿತನಾದ. 2013ರಿಂದ ಈವರೆಗೂ ಲೀವಿಂಗ್ ಟುಗೆದರ್‌ಮಾಡಿಕೊಂಡು ಒಟ್ಟಿಗೆ ವಾಸಿಸುತ್ತಿದ್ದರು.ಲೋಕ್ಯಳನ್ನು ನಾಯಕಿಯಾಗಿಟ್ಟು ಎರಡು ಸಿನೆಮಾ ತೆಗೆಯುವ ಯೋಜನೆ ರಮೇಶನದಾಗಿತ್ತೆನ್ನಲಾಗಿದೆ.  ಹೀಗೆ ಹೇಳಿಕೊಂಡು ಹಲವರಿಂದ ಹಣಪಡೆದು ವಂಚಿಸಿದ್ದ.

ಸಿನೆಮಾದಲ್ಲಿ ಪಾತ್ರಕೊಡಿಸುತ್ತೇನೆಂದು ಹಲವು ಮಂದಿಯಿಂದ ಹಣ ವಸೂಲು ಮಾಡಿದ್ದ. ಶಶಿರೇಖಾ ಇಂತಹ ಒಂದು ಸಂದರ್ಭದಲ್ಲಿ ರಮೇಶ್ ನಿಕಟವಾಗಿದ್ದರು. ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಆಕೆ ಅವನನ್ನು ಮದುವೆಯೂ ಆಗಿದ್ದರು ಶಶಿರೇಖಾರಿಗೆ ಮೊದಲಗಂಡನಿಂದ ಒಂದು ಗಂಡು ಮಗು ಇದೆ. ಒಂದು ವರ್ಷ ಮುಂಚೆ ಅವರು ರಮೇಶ್‌ನನ್ನು ವಿವಾಹವಾಗಿದ್ದರು. ತನ್ನ ವಿವಾಹ ನಂತರವೂ ರಮೇಶ್ ಲೋಕ್ಯಳೊಂದಿಗೆ ಸಂಬಂಧ ಮುಂದುವರಿಸಿದ್ದು ಅವರಿಬ್ಬರ ನಡುವೆ ಜಗಳಕ್ಕೆ ಕಾರಣವಾಗಿತ್ತು. ರಮೇಶ್ ವಿರುದ್ಧ ಶಶಿರೇಖಾ ಪೊಲೀಸ್ ದೂರು ಕೂಡ ನೀಡಿದ್ದರು. ನಂತರ ರಾಜಿ ಪಂಚಾಯಿತಿ ನಡೆದಿತ್ತು. ಈ ಕೋಪದಲ್ಲಿ ಶಶಿರೇಖಾಗೊಂದು ಗತಿ ತೋರಿಸಲು ಅವನು ಸಂಚು ನಡೆಸುತ್ತಿದ್ದ. ಕೊನೆಗೂ ಪ್ರೇಯಸಿಯೊಂದಿಗೆ ಸೇರಿ ಶಶಿರೇಖಾರನ್ನು ಕೊಂದು ರುಂಡಮುಂಡವನ್ನು ಬೇರ್ಪಡಿಸಿ ಒಂದನ್ನು ಕಸದ ರಾಶಿಗೆ ಇನ್ನೊಂದು ಕಾಲುವೆಯೊಂದಕ್ಕೆ ಎಸೆದು ಅವರಿಬ್ಬರೂ ಅಡಗಿ ಕುಳಿತಿದ್ದರುಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News