×
Ad

ಪಾಕ್‌ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿಗೆ 9 ಬಲಿ

Update: 2016-02-07 22:40 IST

ಕ್ವೆಟ್ಟಾ, ಫೆ.7: ಇಲ್ಲಿಗೆ ಸಮೀಪದ ಮಿಲಿಟರಿ ವಾಹನದ ಬಳಿ ಆತ್ಮಹತ್ಯಾ ಬಾಂಬರ್ ಒಬ್ಬ ಸ್ಫೋಟಗೊಂಡ ಘಟನೆಯಲ್ಲಿ ಕನಿಷ್ಠ 9 ಮಂದಿ ಮೃತಪಟ್ಟು, ಇತರ 40 ಮಂದಿ ಗಾಯಗೊಂಡಿದ್ದಾರೆ.
ಸುಮಾರು 46 ಶತಕೋಟಿ ಡಾಲರ್ ಅಂದಾಜು ವೆಚ್ಚದ ಉದ್ದೇಶಿತ ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್ ಪ್ರದೇಶದಲ್ಲೇ ಈ ಘಟನೆ ನಡೆದಿದೆ.

ಸೈಕಲ್‌ನಲ್ಲಿ ಹೋಗುತ್ತಿದ್ದ ಆತ್ಮಹತ್ಯಾ ಬಾಂಬರ್ ಸೇನಾ ವಾಹನದ ಬಳಿಯೇ ತನ್ನನ್ನು ಸ್ಫೋಟಿಸಿಕೊಂಡ ಎಂದು ಹಿರಿಯ ಪೊಲೀಸ್ ಅಧಿಕಾರಿ ಇಮ್ತಿಯಾಜ್ ಷಾ ಹೇಳಿದ್ದಾರೆ. ಪಾಕಿಸ್ತಾನದ ಅರೆಮಿಲಿಟರಿ ಪಡೆ ಈ ದಾಳಿಯ ಗುರಿಯಾಗಿತ್ತು. ನಗರದ ಮಧ್ಯಭಾಗದಲ್ಲಿ ಮಧ್ಯಾಹ್ನ ನಡೆದ ಘಟನೆಯಲ್ಲಿ ಅರೆಸೇನಾ ಪಡೆಯ ಕನಿಷ್ಠ ಮೂವರು ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಪಡೆಯ ವಕ್ತಾರ ಖಾನ್ ವಸಾಯ್ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News