×
Ad

ಫೆಲೆಸ್ತೀನ್ ಮನೆಗಳ ಧ್ವಂಸ ನಿಲ್ಲಿಸಲು ಇಸ್ರೇಲ್‌ಗೆ ಸೂಚನೆ

Update: 2016-02-07 22:40 IST

ಬ್ರುಸ್ಸೆಲ್ಸ್ (ಬೆಲ್ಜಿಯಂ), ಫೆ.7: ಫೆಲಸ್ತೀನಿಯರ ಮನೆಗಳನ್ನು ಧ್ವಂಸಗೊಳಿಸುವ ಕಾರ್ಯಾಚರಣೆಯನ್ನು ಇಸ್ರೇಲ್ ತಕ್ಷಣ ಸ್ಥಗಿತಗೊಳಿಸಬೇಕು ಎಂದು ಯೂರೋಪಿಯನ್ ಯೂನಿಯನ್ ಎಚ್ಚರಿಕೆ ನೀಡಿದೆ. ಈ ಮನೆಗಳಲ್ಲಿ ಯೂರೋಪಿಯನ್ ಯೂನಿಯನ್ ನೆರವಿನ ಮನೆಗಳೂ ಇವೆ. ಆದ್ದರಿಂದ ತಕ್ಷಣ ಕಾರ್ಯಾಚರಣೆ ಸ್ಥಗಿತಗೊಳಿಸಬೇಕು ಮತ್ತು ಪಶ್ಚಿಮ ದಂಡೆಯ ಆಕ್ರಮಿತ ಪ್ರದೇಶದಲ್ಲಿ ಇಸ್ರೇಲಿ ವಸಾಹತು ವಿಸ್ತರಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದೆ.

ಕಳೆದ ವಾರ ಪಶ್ಚಿಮ ದಂಡೆಯ ಸಿ ಕ್ಷೇತ್ರದಲ್ಲಿ ಹಲವು ಬೆಳವಣಿಗೆಗಳು ನಡೆದಿವೆ. ಇದು ಭವಿಷ್ಯದಲ್ಲಿ ಫೆಲೆಸ್ತೀನ್ ದೇಶಕ್ಕೆ ಮಾರಕವಾಗಬಹುದು ಮತ್ತು ಎರಡೂ ಪಕ್ಷಗಳನ್ನು ಮತ್ತಷ್ಟು ದೂರ ಮಾಡಲು ಕಾರಣವಾಗಬಹುದು ಎಂದು ಯೂರೋಪಿಯನ್ ಒಕ್ಕೂಟದ ರಾಜತಾಂತ್ರಿಕ ಸೇವಾ ವಿಭಾಗದ ಪ್ರಕಟನೆ ಹೇಳಿದೆ. ಅಣುವಿದ್ಯುತ್ ಘಟಕದಲ್ಲಿ ವಿಕಿರಣ ಸೋರಿಕೆ
ನ್ಯೂಯಾರ್ಕ್, ಫೆ.7: ನ್ಯೂಯಾರ್ಕ್ ಸಿಟಿ ಉತ್ತರ ಭಾಗದಲ್ಲಿರುವ ಅಣುವಿದ್ಯುತ್ ಘಟಕವೊಂದರಲ್ಲಿ ಸೋರಿಕೆ ಉಂಟಾಗಿ, ನೀರು ಕಲುಷಿತಗೊಂಡಿದ್ದು, ವಿಕಿರಣಶೀಲ ಟ್ರಿಟಿಯಂ ಅಂತರ್ಜಲಕ್ಕೂ ತಲುಪಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಉನ್ನತ ತನಿಖೆಗೆ ಆದೇಶಿಸಲಾಗಿದೆ ಎಂದು ಗವರ್ನರ್ ಆಂಡ್ರೂ ಕ್ಯೂಮೊ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News