ಮೇಕ್ ಇಂಡಿಯಾ ಮತ್ತು ಹೇಟ್ ಇಂಡಿಯಾ ಜೊತೆ ಜೊತೆಯಾಗಿ ಚಲಿಸಲಾರದು: ತರೂರ್

Update: 2016-02-08 13:33 GMT

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ಶಶಿತರೂರ್ ಹಾವರ್ಡ್ ಯುನಿವರ್ಸಿಟಿಯ ವಾರ್ಷಿಕ ಇಂಡಿಯನ್ ಕನ್ವೆನ್ಶನ್ 2016ರಲ್ಲಿ ಮಾತಾಡುತ್ತ ಮೋದಿ ಸರಕಾರವನ್ನು ಟೀಕಿಸಿದ್ದಾರೆ. ಮೇಕ್‌ಇನ್ ಇಂಡಿಯಾ ಹಾಗೂ ಹೇಟ್ ಇನ್ ಇಂಡಿಯಾಜೊತೆಜೊತೆಯಾಗಿ ಮುಂದೆ ಸಾಗದು. ದೇಶದ ಪ್ರಗತಿ, ವಿಕಾಸ, ಇನ್ಫ್ರಾಸ್ಟ್ರಕ್ಚರ್‌ಗಾಗಿ ವಿದೇಶಿ ಬಂಡಾವಾಳ ತುಂಬ ಅಗತ್ಯವಿದೆ.ಆದರೆ ವಿದೇಶಿ ಹೂಡಿಕೆ ದೇಶದಲ್ಲಿ ಬಹುಧರ್ಮೀ ವಿಚಾರಧಾರೆ ಸುರಕ್ಷಿತ ಎಂದು ಅನುಭವಾದಾಗ ಬರುತ್ತದೆ ಎಂದು ತರೂರ್ ಹೇಳಿದ್ದಾರೆ. ಬಿಜೆಪಿ ನಾಯಕರ ಮೂಲಕ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದ್ವೇಷದ ಅಭಿಯಾನ ನಡೆಯುತ್ತಿದೆ. ಒಂದು ವೇಳೆ ನಾವು ವಿಶ್ವದ ಮುಂದೆ ಮಹಾಶಕ್ತಿ ಆಗ ಬಯಸುವುದಿದ್ದರೆ ಮೊದಲು ಮನೆಯೊಳಗಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಾಗಿದೆ. ವಾಸ್ತವವೇನೆಂದರೆ ನಮ್ಮ ಜನರು ನಮ್ಮಲ್ಲಿ ಸುರಕ್ಷಿತ, ಆರೋಗ್ಯಪೂರ್ಣ, ಉತ್ತಮವಾಗಿ ಬದುಕುವುದಕ್ಕಾಗಿ ಬಹಳಷ್ಟು ಮಾಡಬೇಕಾಗಿದೆ. ಮೋದಿಯ ವಿದೇಶಿ ಪ್ರವಾಸಗಳ ಕುರಿತು ಪ್ರಸ್ತಾಪಿಸಿದ ತರೂರ್ ನಾವು ಜಗತ್ತಿನೆಲ್ಲೆಡೆ ಹೋಗಿ ವಿದೇಶಿ ಹೂಡಿಕೆ ಆಕರ್ಷಿಸುತ್ತಿದ್ದೇವೆ. ಮೇಕ್ ಇನ್ ಇಂಡಿಯಾ ಸ್ಟಾರ್ಟ್‌ಅಪ್ ಇಂಡಿಯಾಹಾಗೂ ಡಿಜಿಟಲ್ ಇಂಡಿಯಾದ ಮಾತಾಡುತ್ತಿದ್ದೇವೆ. ಇನ್ನೊಂದು ಕಡೆ ದೇಶದ ಸಾಲ ಹೆಚ್ಚಳವಾಗುತ್ತಿದ್ದರೆ ಏನು ಪ್ರಯೋಜನವಾಯಿತು ಎಂದು ಅವರು ಪ್ರಶ್ನಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News