×
Ad

ಮೋದಿಯದ್ದು ದೊಡ್ಡ ರೈತವಿರೋಧಿ ಸರಕಾರ: ಯೋಗೇಂದ್ರ ಯಾದವ್

Update: 2016-02-08 19:36 IST

ಹೊಸದಿಲ್ಲಿ: ನರೇಂದ್ರಮೋದಿ ಸರಕಾರ ವಿರುದ್ಧ ಸ್ವರಾಜ್ ಅಭಿಯಾನ್ ಸಂಯೋಜಕರಾದ ಯೋಗೇಂದ್ರ ಯಾದವ್‌ರು ಬಹುದೊಡ್ಡ ರೈತವಿರೋಧಿ ಸರಕಾರ ಎಂದು ಆರೋಪಿಸಿದ್ದಾರೆ. ಲೋಕಸಭಾ ಚುನಾವಣೆ ವೇಳೆ ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಮಾತ್ರವಲ್ಲ ನೈರೋಬಿಯ ಡಬ್ಲೂಟಿಎ ಶೃಂಗದಲ್ಲಿಯೂ ರೈತರ ವಿಷಯದಲ್ಲಿ ಮಂಡಿಯೂರಿದೆ ಎಂದು ಅವರು ಹೇಳಿದ್ದಾರೆ. ಯೋಗೇಂದ್ರಯಾದವ್‌ರು ’ನರೇಂದ್ರಮೋದಿ ಸರಕಾರ ದ ನೀತಿಯನ್ನು ವಿಶ್ಲೇಷಿಸುತ್ತಾ ಇದು ರೈತವಿರೋಧಿಸರಕಾರವಾಗಿದೆ. ಈವರೆಗೆ ಸರಕಾರದ ನಡವಳಿಕೆಯನ್ನು ಪರಿಗಣಿಸಿ ಇದು ಬಹುದೊಡ್ಡ ರೈತವಿರೋಧಿ ಸರಕಾರ ವೆಂದು ನಾನು ಹೇಳಬಲ್ಲೆ’ಎಂದು ಪ್ರತಿಕ್ರಿಯಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ತಾನು ಸರಕಾರ ರಚಿಸಲು ಸಾಧ್ಯವಾದರೆ ರೈತರ ಫಸಲಿಗೆ ಶೇ. 50ರಷ್ಟು ಅಧಿಕ ಬೆಲೆ ದೊರಕಿಸಿಕೊಡುವುದಾಗಿ ಹೇಳಿತ್ತು. ಆದರೆ ಅದು ಈಗ ತನ್ನ ವಾಗ್ದಾನದಿಂದ ಪಲ್ಟಿ ಹೊಡೆದಿದೆ ಎಂದು ಯೋಗೇಂದ್ರಯಾದವ್ ಟೀಕಿಸಿದ್ದಾರೆ. ಪ್ರಧಾನಮಂತ್ರಿ ಕೃಷಿ ಬೆಳೆ ಬಿಮಾ ಯೋಜನೆಯನ್ನು ಪ್ರಸ್ತಾಪಿಸಿದ ಅವರು ಈ ಯೋಜನೆ ಹಿಂದಿನ ಯೋಜನೆಗಿಂತ ಸ್ವಲ್ಪ ಉತ್ತಮವಾಗಿದೆ. ಆದರೆ ಇದು ಹೊಸ ಯೋಜನೆಯಲ್ಲ. ಎರಡು ಮೂರು ಹಳೆಯೋಜನೆಯನ್ನು ಒಟ್ಟುಸೇರಿಸಿ ಹೊಸ ಹೆಸರಿಸಲಾಗಿದೆ. ಈ ರೀತಿ ಬೆಳೆ ನಷ್ಟ ಅನುಭವಿಸುವ ರೈತರನ್ನು ಅಪಹಾಸ್ಯ ಮಾಡಲಾಗಿದೆ. ಸರಕಾರವು ಬಿಮಾ ಯೋಜನೆ ರೂಪಿಸುವ ಸಂದರ್ಭದಲ್ಲಿ ತನ್ನ ಬಳಿಯಿದ್ದ ಸದಾವಕಾಶವನ್ನೇ ಕಳಕೊಂಡಿತು. ರೈತರಿಗೆ ಅವರಿಗಾದ ನಷ್ಟ ಶೀಘ್ರ ಸಿಗುವಂತಹ ಯೋಜನೆ ಅಗತ್ಯವಿದೆ. ಆದರೆ ಮೋದಿಯ ಯೋಜನೆ ಇದರಲ್ಲಿ ವಿಫಲವಾಗಿದೆ ಎಂದು ಬೊಟ್ಟು ಮಾಡಿದ್ದಾರೆ. ಮೋದಿ ಸರಕಾರ ರೈತರ ಸಂಕಷ್ಟ ಪರಿಹರಿಸುವ ಬದಲಾಗಿ ಬಹುರಾಷ್ಟ್ರೀಯ ಕಂಪೆನಿಗಳ ಎಜೆಂಡಾಧಾರಿತವಾಗಿ ಕೆಲಸಮಾಡುತ್ತಿದೆ. ಬೆಳೆಹಾನಿಯನ್ನು ತಡೆಯುವ, ನೀರಾವರಿ ಸೌಲಭ್ಯ ಹಾಗೂ ಅಗ್ಗದ ವಿದ್ಯತ್ ಸರಬರಾಜು ರೈತರ ಅಗತ್ಯವಾಗಿದೆ ಎಂದೂ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News