ಪುಣೆ: 'ಮಹಾ' ಮುಖ್ಯಮಂತ್ರಿ ಪತ್ನಿಗೆ ಗಾಳಿಯಿಂದ ಚಿನ್ನದ ಚೈನ್ ತೆಗೆದು ಕೊಟ್ಟ ಸ್ವಾಮಿಜಿ
Update: 2016-02-08 20:27 IST
ಪುಣೆ: ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಮಹರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್‌ರ ಪತ್ನಿಯ ಅಂಧವಿಶ್ವಾಸವು ವಿವಾಧಾಸ್ಪದವಾಗಿದೆ. ಅಮೃತಾ ಪಡ್ನವಿಸ್ ಪುಣೆಯ ಕಾಲೇಜ್‌ವೊಂದರ ಸಮಾರಂಭದಲ್ಲಿ ಭಾಗವಹಿಸಿದ್ದರು. ಇಲ್ಲಿ ಅನೇಕರನ್ನು ಪುರಸ್ಕರಿಸಲಾಗಿತ್ತು. ಇಲ್ಲಿ ಬ್ರಹ್ಮ ಋಷಿ ಗುರುವಾನಂಧ ಸ್ವಾಮಿಗೆ ಸೂರ್ಯರತ್ನ, ಆಧುನಿಕ ಯುಗದ ಸಂತ ಎಂದು ಗೌರವಿಸಲಾಗಿತ್ತು.
ಸಮ್ಮೇಳನದ ನಂತರದೇವೆಂದ್ರ ಪಡ್ನವಿಸ್ ಪತ್ನಿಸ್ಟೇಜ್‌ಗೆ ಸ್ವಾಮಿಜಿಯನ್ನು ಭೇಟಿಯಾಗಲು ಹೋಗಿದ್ದರು. ಅಮೃತ ಸ್ವಾಮಿಯ ಆಶಿರ್ವಾದ ಪಡೆಯುತ್ತಿದ್ದಾಗ ಸ್ವಾಮಿ ಗಾಳಿಯಲ್ಲಿ ಕೈ ಆಡಿಸಿ ಒಂದು ಚಿನ್ನದ ಚೈನ್ ತೆಗೆದರು ಅದನ್ನು ಅವರು ಅಮೃತ ಪಡ್ನವಿಸ್‌ಗೆ ನೀಡಿದರು. ಮತ್ತು ಪವಾಡಸದೃಶ ಚೈನ್ ಎಂದು ಅವರು ಹೇಳಿದ್ದರು ಎಂದು ವರದಿಯಾಗಿದೆ. ಅಮೃತಾರ ಮೂಡ ನಂಬಿಕೆಯೆಂದು ಮಹಾರಾಷ್ಟ್ರದಲ್ಲಿ ಇದು ಚರ್ಚಿಸಲ್ಪಡುತ್ತಿದೆ.