×
Ad

ಟರ್ಕಿ: 2 ದೋಣಿ ಮುಳುಗಿ 33 ವಲಸಿಗರ ಸಾವು

Update: 2016-02-08 23:27 IST

ಇಸ್ತಾಂಬುಲ್/ಅಥೆನ್ಸ್, ಫೆ. 8: ಟರ್ಕಿಯಿಂದ ಗ್ರೀಸ್‌ಗೆ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಎರಡು ದೋಣಿಗಳು ಸೋಮವಾರ ಏಜಿಯನ್ ಸಮುದ್ರದಲ್ಲಿ ಮುಳುಗಿ ಕನಿಷ್ಠ 33 ಮಂದಿ ಮೃತಪಟ್ಟಿದ್ದಾರೆ ಎಂದು ಟರ್ಕಿ ಮಾಧ್ಯಮಗಳು ವರದಿ ಮಾಡಿವೆ.
ಮೊದಲ ಪ್ರಕರಣದಲ್ಲಿ, ಇಝ್ಮಿರ್ ಸಮುದ್ರದಲ್ಲಿ ದೋಣಿಯೊಂದು ಮುಳುಗಿ 11 ವಲಸಿಗರು ಮೃತಪಟ್ಟರು. ಇನ್ನೊಂದು ಪ್ರಕರಣದಲ್ಲಿ, ಬಲಿಕೆಸಿರ್ ರಾಜ್ಯದ ಎಡ್ರೆಮಿಟ್ ಜಿಲ್ಲೆಯ ಸಮುದ್ರದಲ್ಲಿ ದೋಣಿಯೊಂದು ಮುಳುಗಿ 22 ಮಂದಿ ಪ್ರಾಣ ಕಳೆದುಕೊಂಡರು.
ಎರಡೂ ದೋಣಿಗಳು ಗ್ರೀಕ್ ದ್ವೀಪ ಲೆಸ್ಬೋಸ್‌ಗೆ ಪ್ರಯಾಣಿಸುತ್ತಿದ್ದವು ಎನ್ನಲಾಗಿದೆ.
ಗ್ರೀಸ್ ಸಮುದ್ರದಲ್ಲಿ ಜನವರಿ 22ರಂದು ದೋಣಿಯೊಂದು ಮುಳುಗಿ 45 ಸಿರಿಯ ವಲಸಿಗರು ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News