‘ಪ್ರತಿಬಿಂಬ್ ಆಫ್ ತರಂಗ್’ ಗಾಳಿಪಟ ಉತ್ಸವ

Update: 2016-02-08 19:03 GMT

ಮಣಿಪಾಲ, ಫೆ.8: ಮಣಿಪಾಲ ವಿವಿಯ ವೆಲಂಟಿಯರ್ಸ್ ಸರ್ವಿಸ್ ಆರ್ಗನೈಸೇಶನ್ ವತಿಯಿಂದ ಪ್ರತಿಬಿಂಬ್ ಆಫ್ ತರಂಗ್ ಗಾಳಿಪಟ ಉತ್ಸವವನ್ನು ಮಣಿಪಾಲ ಎಂಡ್‌ಪಾಯಿಂಟ್‌ನಲ್ಲಿ ರವಿವಾರ ಏರ್ಪಡಿಸಲಾಗಿತ್ತು.

 ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ಮಾತನಾಡಿ, ವಿದ್ಯಾರ್ಥಿಗಳು ಓದಿನೊಂದಿಗೆ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಒತ್ತಡವನ್ನು ಕಡಿಮೆ ಮಾಡಬಹುದಾಗಿದೆ ಎಂದು ಹೇಳಿದರು.

ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದಯಾನಂದ ಉಪಸ್ಥಿತರಿದ್ದರು. ಎಸ್ಪಿಯವರು ವಿದ್ಯಾರ್ಥಿಗಳೊಂದಿಗೆ ಸೇರಿ ಗಾಳಿಪಟ ಹಾರಿಸಿದರು. ಸುಮಾರು ಮೂರು ಸಾವಿರ ಬಣ್ಣ ಬಣ್ಣದ ಗಾಳಿಪಟಗಳು ಬಾನಂಗಳದಲ್ಲಿ ಹಾರಾಡಿದವು. ಶಾಲಾಮಕ್ಕಳು, ಮಣಿಪಾಲ ವಿವಿಯ ವಿದ್ಯಾರ್ಥಿಗಳು ಗಾಳಿಪಟ ಹಾರಿಸಿ ಸಂಭ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News